Friday, October 18, 2024

ಮಹಾಯುದ್ಧದಲ್ಲಿ ಯಾರಿಗೆ ಮಣೆ?

-ಪ್ರಸನ್ನ ಕರ್ಪೂರ 

ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೆ ಲಿತಾಂಶ ಹೊರಬಿದ್ದ ಕೆಲ ದಿನಗಳಲ್ಲೇ ಪಕ್ಕದ ಮಹಾರಾಷ್ಟ್ರದ ವಿಧಾನಸಭೆಗೆ ಚುನಾವಣೆಗೆ ಮುಹೂರ್ತ ಫಿಕ್ಸ್  ಆಗಿದೆ. ಈ ಎರಡೂ ರಾಜ್ಯಗಳ ಚುನಾವಣೆ ಲಿತಾಂಶ ಆಧರಿಸಿ ನೋಡುವುದಾದರೆ ಅಚ್ಚರಿಯ ಲಿತಾಂಶ ನಿರೀಕ್ಷಿಸಬಹುದಾದರೂ ಮಹಾರಾಷ್ಟ್ರದ ಮತದಾರರ ಮನಸ್ಥಿತಿ ಮತ್ತು ರಾಜಕೀಯ ಸಮೀಕರಣ ಕೊಂಚ ಭಿನ್ನವಾಗಿಯೇ ಇದೆ. ಮೇಲ್ನೋಟಕ್ಕೆ ಆಡಳಿತ ವಿರೋಧಿ ಅಲೆ ಪ್ರಬಲ ಎಂದೆನಿಸಿದರೂ ಹೀಗೆ ಎಂದು ಹೇಳಲಾಗದು.

  ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ಮಹಾ ಅಘಾಡಿ(ಉದ್ಧವ ಠಾಕ್ರೆ, ಶರದ್ ಪವಾರ ಹಾಗೂ ಕಾಂಗ್ರೆಸ್) ಹೆಚ್ಚು ಸ್ಥಾನ ಪಡೆಯುವ ಮೂಲಕ ಚೇತರಿಕೆ ಕಂಡಿದ್ದು ಮಹಾಯುತಿಯ ಬಿಜೆಪಿ ಹಾಗೂ ಶಿವಸೇನೆ(ಏಕನಾಥ ಶಿಂಧೆಬಣ), ಎನ್‌ಸಿಪಿ (ಅಜಿತ ಪವಾರ ಬಣ)ಕೇವಲ 17
ಸೀಟುಗಳನ್ನಷ್ಟೇ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹಾಗೆ ನೋಡಿದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಾಕಷ್ಟು ವಿಚಾರಗಳು, ವಿಷಯಗಳಲ್ಲಿ ವ್ಯತ್ಯಾಸವಿದೆ. ಈ ಮಧ್ಯೆ ಬಿಜೆಪಿ ಮೇಲೆ ಎರಡು ಪ್ರಮುಖ ಪಕ್ಷಗಳನ್ನು ಒಡೆದು ಅಧಿಕಾರಕ್ಕೆ ಬಂದ ಆರೋಪವೂ ಇದೆ. ಈ ಮಧ್ಯೆ ಅಜಿತ ಪವಾರ ಬಣ ಸದ್ಯದಲ್ಲೇ ಶರದ ಪವಾರ್ ಬಣಕ್ಕೆ ಮರಳುವ ಸಾಧ್ಯತೆ ಕೂಡ ದಟ್ಟವಾಗಿದ್ದು ಹಾಗೇನಾದರೂ ಆದಲ್ಲಿ ಮಹಾಯುತಿ ಒಕ್ಕೂಟಕ್ಕೆ ಹಿನ್ನಡೆ ಖಚಿತ ಎಂದೇ ಹೇಳಲಾಗುತ್ತಿದೆ. ಅಜಿತ ಪವಾರ ಮತ್ತು ಶರದ ಪವಾರ ಬಣ ಒಂದಾದರೆ ಹಾಲಿ ಸಿಎಂ ಏಕನಾಥ ಶಿಂಧೆಗೆ ಇದು ಅಪಾಯದ ಗಂಟೆ ಇದ್ದಂತೆ.

ಕಳೆದ ವರ್ಷ ಕೊಲ್ಹಾಪುರದಲ್ಲಿ ನೆರೆ ಬಂದಾಗ ಡ್ನವೀಸರನ್ನು ಬಿಟ್ಟು ಅಮಿತ ಶಾ ನೇರವಾಗಿ ಪ್ರವಾಹಪೀಪಿಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೇ ಇವರಿಬ್ಬರ ಮಧ್ಯೆ ಸಂಬಂಧ ಅಷ್ಟಕ್ಕಷ್ಟೇ ಎಂದು ಹೇಳಲು ಇದೊಂದು ಉದಾಹರಣೆಯಷ್ಟೇಘಿ. ಇದರ ಜತೆ ಜತೆಗೆ ಮೂಲ ನಾಯಕರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ವಲಸಿಗರಿಗೆ ಮಣೆ ಹಾಕಿದ ಆರೋಪ ಡ್ನವೀಸರ ಮೇಲಿದೆ. ಇವರು ಪ್ರಧಾನಿ ಮೋದಿ ಅವರ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ಇವರ ಪ್ಲಸ್ ಪಾಯಿಂಟ್. ಇನ್ನು ಹಾಲಿ ಸಿಎಂ ಏಕನಾಥ ಶಿಂಧೆ ಏನಿದ್ದರೂ ಠಾಣೆಗೆ ಸೀಮಿತ ಎಂಬುದು ಜಗಜ್ಜಾಹೀರ. ಒಕ್ಕೂಟವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸುವ ವರ್ಚಸ್ಸು ಇವರಿಗಿಲ್ಲಘಿ. ಚುನಾವಣೆ ಸಮೀಪಿಸುತ್ತಿದ್ದಂತೆ ಮುಂಬೈ ಪಾಲಿಕೆ ನೌಕರರಿಗೆ ಬೋನಸ್ ಘೋಷಣೆ, ಮುಂಬೈ ಪ್ರವೇಶೀಸುವ ಟೋಲ್‌ಗಳನ್ನು ಶುಲ್ಕ ಮುಕ್ತ ಮಾಡಿರುವುದು ಚುನಾವಣಾ ದೃಷ್ಟಿಕೋನದಿಂದ ಘೋಷಿಸಿದ ಒಂದು ಆಮಿಷವಷ್ಟೇ. ಇನ್ನು ಕೊನೆ ಗಳಿಗೆಯಲ್ಲಿ ವಿಧಾನಪರಿಷತ್‌ಗೆ 7 ಸದಸ್ಯರನ್ನು ನೇಮಿಸಿರುವುದು ಕೂಡ ಸ್ವಪಕ್ಷೀಯರ ಓಲೈಕೆ ತಂತ್ರದ ಒಂದು ಭಾಗವಾಗಿದೆ.

ಬದಲಾದ ಸನ್ನಿವೇಶದಲ್ಲಿ ಉದ್ಧವ ಠಾಕ್ರೆಯವರ ಬಲ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ.ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಗಣನೀಯವಾಗಿ ಇವರತ್ತ ವಾಲಿವೆ. ಆದರೆ ಹೃದಯ ಸಮಸ್ಯೆಯಿಂದ ಸ್ಟಂಟ್ ಹಾಕಿಸಿಕೊಂಡು ಅನಿವಾರ್ಯ ವಿಶ್ರಾಂತಿಗೆ ಮೊರೆ ಹೋಗಬೇಕಿರುವುದು ಉದ್ಧವ ಠಾಕ್ರೆ ಅವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಇವರ ಪ್ರಚಾರ ಅವಧಿ ಕಡಿಮೆಯಾದಷ್ಟು ಲಾಭ ಮಹಾಯುತಿ ಒಕ್ಕೂಟಕ್ಕೆ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಸಂಪನ್ಮೂಲದ್ದೇ ಚಿಂತೆ

 ಇನ್ನೊಂದೆಡೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಪರಾಧ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅತ್ಯಲ್ಪ ಮೊತ್ತದ ಹಣಕ್ಕಾಗಿ ಕೊಲೆ ನಡೆಯುತ್ತಿವೆ ಎಂದರೆ ಯುವಪೀಳಿಗೆಯಲ್ಲಿ ದುಡ್ಡಿನ ಅವಶ್ಯಕತೆಯ ಪ್ರಮಾಣವನ್ನು ನಾವು ಊಹಿಸಬಹುದಾಗಿದೆ. ಕರ್ನಾಟಕ ಮಾದರಿಯಲ್ಲಿ ಮಹರಾಷ್ಟ್ರದಲ್ಲೂ ಪ್ರತಿ ಮನೆ ಯಜಮಾನಿಗೆ 1500 ರೂ ನೀಡುವ ಯೋಜನೆಯಿಂದ ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣವೇ ಇಲ್ಲದಂತಾಗಿದೆ. ಬಹುತೇಕ ಸರಕಾರಿ ಜಮೀನುಗಳೆಲ್ಲ ಬಂಡವಾಳಶಾಹಿಗಳ ಕೈ ಸೇರಿದ ಆರೋಪವಿದೆ. ಬೊಕ್ಕಸಕ್ಕೆ ಆದಾಯದ ಮೂಲವೇ ಇಲ್ಲದಂತಾಗಿದ್ದು ಈಗ ಹೊಸದಾಗಿ ಆಯ್ಕೆಯಾಗಿ ಬರುವ ಯಾವುದೇ ಸರಕಾರಕ್ಕೂ ಇದು ದೊಡ್ಡ ಸವಾಲಾಗಲಿದೆ.

 ಮರಾಠಾ ಮೀಸಲು ಹೋರಾಟ

ರಾಜ್ಯದಲ್ಲಿ ಮರಾಠರಿಗೆ ಮೀಸಲು ನೀಡಬೇಕೆನ್ನುವ ಪ್ರಮುಖ ಬೇಡಿಕೆಯೊಂದಿಗೆ ಹೋರಾಟ ನಡೆಸಿರುವ ಶಿವಬಾ ಸಂಘಟನೆಯ ಸಂಸ್ಥಾಪಕ ಮನೋಜ ಜೀರಂಗೆ ಪಾಟೀಲ ಎರಡೂ ಒಕ್ಕೂಟಗಳ ಅಭ್ಯರ್ಥಿಗಳ ಘೊಷಣೆ ನಂತರ ತಮ್ಮ ನಿಲುವು ಮತ್ತು ಒಲವು ಪ್ರಕಟಿಸುವುದಾಗಿ ತಿಳಿಸಿರುವುದು ವಿಶೇಷವಾಗಿದೆ. ಇದರ ಪ್ರತಿಧ್ವನಿ ಲೋಕಸಭೆ ಚುನಾವಣೆ ಲಿತಾಂಶದಲ್ಲೂ ಅನುರಣಿಸಿದೆ.ಇವರ ಜತೆಗೆ ಒಬಿಸಿ ಸಂಘರ್ಷ ಸೇನೆಯ ಸಂಸ್ಥಾಪಕ ಲಕ್ಷ್ಮಣ ಹಾಕೆ ಕೂಡ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲಘಿ.ಈ ಮಧ್ಯೆ ಮೀಸಲು ಹೋರಾಟ ಹತ್ತಿಕ್ಕುವ ಯತ್ನ ನಡೆಸಿದ ಆರೋಪ ಉಪಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಮೇಲಿದೆ.ಮರಾಠಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ ಇಷ್ಟರಲ್ಲೇ ಸಭೆ ಸೇರಿ ಚುನಾವಣೆ ವಿಚಾರದಲ್ಲಿ ಬೆಂಬಲ ಅಥವಾ ಸ್ಪರ್ಧೆ ಬಗ್ಗೆ ತೀರ್ಮಾನಿಸಲಿದ್ದು ಇದು ಕೂಡ ಮಹತ್ತರ ಬೆಳವಣಿಗೆಯಾಗಿದೆ.

ಮಹಾರಾಷ್ಟ್ರ ಬಹಳಷ್ಟು ವಿಷಯಗಳಲ್ಲಿ ನಿರ್ಣಾಯಕವಾಗಿದೆ. ಎಂದೂ ಮಲಗದ ನಗರ ಖ್ಯಾತಿಯ ಮುಂಬೈ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕೂಡ ಹೌದು. ಸಹಜವಾಗಿಯೇ ಇಲ್ಲಿ ಚುಕ್ಕಾಣಿ ಹಿಡಿಯಲು ಎಲ್ಲ ಪಕ್ಷಗಳು ಬಯಸುತ್ತವೆ. ಇದಕ್ಕಾಗಿ ಇನ್ನಿಲ್ಲಿದ ಕಸರತ್ತು ಕೂಡ ಮಾಡುತ್ತವೆ.

Tuesday, February 13, 2024

ಪ್ರೀತಿ ಮಧುರ ಅನುಭೂತಿ

ಪ್ರೀತಿ ಮಧುರ ಅನುಭೂತಿ

-ಪ್ರಸನ್ನ ಕರ್ಪೂರ

ಪ್ರೀತಿ ಪಡೆದವರಿಗೆ ಮಧುರ ಅನುಭೂತಿ. ಹೌದು ಪ್ರೀತಿ ಅಂದ್ರೇನೆ ಹಾಗೆ. ಎಲ್ಲಿ  ಯಾವಾಗ ,ಹೇಗೆ ಅಂಕುರವಾಗುತ್ತೆ ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಲ್ಲವೂ ನಿಗೂಢ. ಅದೊಂದು ಅಮೂರ್ತ ಪರಿಕಲ್ಪನೆ. ಊಹೆಗೂ ನಿಲುಕದ ಸಾಧನೆಯೂ ಹೌದು ವೇದನೆಯೂ ಹೌದು. ಅದರ ಸೆಳೆತಕ್ಕೆ ಸಿಕ್ಕು ದಡ ಸೇರಿದವರು ಹಲವರಿದ್ದರೆ ಗುರಿ ಮುಟ್ಟಲಾಗದೇ ದೇವದಾಸರಾದವರು ಅನೇಕರು. ಕೆಲವರಿಗೆ ಇದು ವರವಾದರೆ ಹಲವರಿಗೆ ಇದು ಹೋರಾಟದ ಹಾದಿಯನ್ನು ತೋರಿಸಿದೆ. ಪ್ರೀತಿಯ ಪಯಣದಲ್ಲಿ ಪಯಣಿಗರು ಹಲವರು.

 ಈ ಮಧ್ಯೆ ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಎಲ್ಲವೂ ಸುಂದರ ಎನಿಸುತ್ತದೆ. ಪಾರಿಜಾತಗಳು ಅಲ್ಲಿ ಅರಳುತ್ತವೆ. ಮನಸುಗಳು ಮಿಲನಕ್ಕೆ ಹಾತೊರೆಯುತ್ತವೆ.  ಹೊಸ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ, ಬಯಕೆಗಳು ಹುಟ್ಟುತ್ತವೆ. ಮನಸ್ಸು ಎಂಬ ಸಾಗರದಲ್ಲಿ ಅದೇನೋ ವಿಚಿತ್ರ ಅಲೆ ಏಳುತ್ತದೆ. ಅದರ ಸುನಾಮಿಗೆ ಸೋಲದವರಿಲ್ಲಘಿ. ಪ್ರೇಮ ಜ್ವರ ಬಂದವರ ಮನಸ್ಸು ನಿವೇದನೆಗಾಗಿ ಮನಸ್ಸು ಹಾತೊರೆಯುತ್ತದೆ. ಸಂಗಾತಿಯ ಚಿತ್ರ ಮನದೊಳಗೆ ಅಚ್ಚಳಿಯದ ಹಾಗೆ ಮನೆ ಮಾಡಿರುತ್ತದೆ. ಕುಳಿತರೂ ನೀನೆ ನಿಂತರೂ ನೀನೆ ಎನ್ನುವ ಜಪ ಶುರುವಾಗುತ್ತದೆ.ನೀನೇ ..ನೀನೆ ನಗೆಲ್ಲಾ ನೀನೆ... ಮನ, ಮನೆ ತುಂಬಲು ಬಾ ಎನ್ನುವ ಒಲವಿನ ಕರೆಯೋಲೆ, ಪ್ರೀತಿಯ ಹಣತಿಯಲ್ಲಿ ನೀನು ಜ್ಯೋತಿ ನಾನು ಅದಕ್ಕೆ ಎಣ್ಣೆಯಾಗುವೆ ಇಬ್ಬರೂ ಸೇರಿ ಬಾಳು ಬೆಳಗೋಣ, ಒಲಿದಾಗ ಪದಗಳುನಾಚಿದ್ದು ನಿನ್ನಿಂದಲೇ, ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ, ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ, ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ ಎನ್ನುವ ವರ್ಣರಂಜಿತ ಪದಗಳು ಪುಂಖಾನುಪುಂಖವಾಗಿ ಹೊರಬರುತ್ತವೆ.ಹಗಲುಗನಸು ಇರುಳು ಕನಸುಗಳಲ್ಲಿಯೂ ಸಂಗಾತಿಯದೇ ನೆನಪು. ಪ್ರೀತಿ, ಪ್ರೇಮದ ಆರಂಭಿಕ ದಿನಗಳಂತೂ ಅತಿ ಮಧುರ. ಚಡಪಡಿಕೆ, ಕನವರಿಕೆ ಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ. ಹರೆಯ ಉಕ್ಕಿ ಹರಿಯುವಾಗ ಮನದೆನ್ನೆಯ ಮದ ಏರಿದಾಗ ಆಗುವ ಅನುಭವವೇ ಬೇರೆ. ಇಬ್ಬರ ಮನಸ್ಸು ಒಂದಾದಾಗ ಸ್ವರ್ಗ ಇನ್ನೇನು ಮೂರೇ ಗೇಣು ಎನ್ನುವ ಹಾಗಿರುತ್ತದೆ.ಈ ಮಧ್ಯೆ ಕೊಂಚ ಮುನಿಸು, ಹಾಸ್ಯ, ತುಂಟತನ ಎಲ್ಲವೂ ಮೇಳೈಸಿದಾಗ ಅದರ ಮಜವೇ ಬೇರೆ. ಅನುಭವಿಸಿದವನಿಗೇ ಗೊತ್ತು ಅದರ ಸವಿ. ಹೃದಯಗಳ ಪಿಸು ಮಾತು ಕೇಳುವ ಸಹೃದಯ ಮನಸುಗಳು ಇದ್ದಾಗ ಪ್ರೀತಿ ಅಮರವಾಗುತ್ತದೆ.ಮನಸ್ಸಿನ ಭಾವನೆಗಳಿಗೆ ಬೆಲೆ ಬರುವುದೇ ಬಯಕೆಯ ಬೇಲಿ ದಾಟಿ ಪ್ರೀತಿ ಪಡೆದಾಗ. 

ಕೆಲವರು ಎಲ್ಲೋ ಒಂದೆಡೆ ಕೂಡಿದಾಗ ಪರಸ್ಪರ ಗಮನ ಸೆಳೆದು ಪ್ರೇಮ ಪಾಶಕ್ಕೆ ಸಿಲುಕಿದರೆ ಇನ್ನು ಹಲವರು ಮದುವೆ ನಂತರ ಹೆಂಡತಿಯನ್ನು ಪ್ರೀತಿಸಲು ಆರಂಭಿಸುತ್ತಾರೆ. ಮೊದ
ಲನೇಯದ್ದು ಎಲ್‌ಬಿಡಬ್ಲು ಅಂದರೆ love before wedding ಆದರೆ ಎರಡನೇಯದ್ದು ಅಧಿಕೃತ ಪರವಾನಗಿ ಸಿಕ್ಕ ನಂತರ ಶುರುವಾದ ಪಯಣ. ಎರಡೂ ಮಾದರಿಯಲ್ಲಿ ಅದರ ಅಮಲು ಮಾತ್ರ ಅಗಾಧ. ವಿರಹದ ನೋವು ನಂತರ ಒಂದಾಗುವ ಸವಿಗಳಿಗೆಗೆ ಸಾಕ್ಷಿಯಾದ ಯುವಜೋಡಿಗಳು ಮೈ ,ಮನಸ್ಸು ಹಗುರಾಯಿತು ಎಂದುಕೊಂಡು ಸಂಭ್ರಮಿಸುತ್ತಾರೆ. ರೋಮಾಂಚನದ ಆಲಿಂಗನ ಅಲ್ಲಿರುತ್ತದೆ. ಒಲಿದ ಜೀವ ಜತೆಗೆ ಇರಲು ಬಾಳು ಸುಂದರ ಎನ್ನುವ ಜೋಡಿ ಪರಸ್ಪರ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಾರೆ. ಸಂಗಾತಿಯ ನೋಟ, ಮೈ ಮಾಟ, ತುಟಿಯಂಚಿನ ತುಂಟ ನಗೆ ಎಲ್ಲವೂ ಅಬ್ಬರಿಸಲು ಆರಂಭಿಸುತ್ತವೆ. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ ಎನ್ನುವ ಹಾಡಿನ ಸಾಲುಗಳು ತನಗರಿವಿಲ್ಲದೆಯೇ ಬಾಯಲ್ಲಿ ಬರಲಾರಂಭಿಸುತ್ತವೆ. ಈಗೆಲ್ಲಾ ವಾಟ್ಸ್‌ಆ್ಯಪ್, ಮೆಸೆಂಜರ್‌ಗಳಿವೆ ಆದರೆ ಹಿಂದಿನ ದಿನಗಳಲ್ಲಿ ಆದರೆ ಪ್ರೇಮಪತ್ರಗಳದ್ದೇ ಪಾರುಪತ್ಯ.ಆಗ ಅದರಲ್ಲಿ ಕೈಚಳಕದ ಗತ್ಯತೆಯಿತ್ತು. ಪದಗಳ ಜ್ಞಾನದ ಅವಶ್ಯಕತೆ ಇತ್ತು. ಆದರೆ ಈಗ ಎಲ್ಲವೂ ಕೃತಕ. ಸರ್ಚ್ ಕೊಟ್ಟರೆ ಸಾಕು ಇಡೀ ಪ್ರೇಮಲೋಕದ ಡಿಕ್ಶನರಿಯೇ ಅನಾವರಣಗೊಳ್ಳುತ್ತದೆ. ಜಸ್ಟ್ ಕಾಪಿ ಪೇಸ್ಟ್ ಅಷ್ಟೇ. ಈಗಿನ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಭಿನ್ನ. ಆದರೆ ಅದು ಇಂದಿಗೂ ನೀಡುವ ಅನುಭೂತಿ ಮಾತ್ರ ಮಧುರ ಅತಿ ಮಧುರ.

Saturday, February 3, 2024

 ರಾಮಮಂದಿರದ ಕನಸಿನ ಸಾರಥಿಗೆ ರತ್ನದ ಮುಕುಟ

-ಪ್ರಸನ್ನ ಕರ್ಪೂರ

 ಬಿಜೆಪಿಯ ಏಳ್ಗೆಗೆ ಇಡೀ ಜೀವನವನ್ನೇ ಮುಡಿಪಿಟ್ಟ ಭೀಷ್ಮ, ರಥಪುರುಷ ಹಾಗೂ ಉಕ್ಕಿನ ಮನುಷ್ಯ ಖ್ಯಾತಿಯ ಲಾಲಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಆ ಮೂಲಕ ಪ್ರಶಸ್ತಿಯ ಘನತೆ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಾಗದು. ಹಿಂದುತ್ವದ ಕಮಂಡಲ ಹಿಡಿದು ರಥ ಏರಿ ದೇಶದ 10 ರಾಜ್ಯಗಳ ಮೂಲಕ 10 ಸಾವಿರ ಕಿಮೀ ಉದ್ದಗಲಕ್ಕೂ ಸುತ್ತಿದ ಈ ಲಾಲಕೃಷ್ಣರಿಗೆ ತಡವಾಗಿಯಾದರೂ ಅತ್ಯುನ್ನತ ಗೌರವ ಸಿಕ್ಕಿದೆ. 80ರ ದಶಕದಲ್ಲಿ ರಾಮ ಮಂದಿರಕ್ಕಾಗಿ ನಡೆದ ಚಳವಳಿಯ ನೇತೃತ್ವವನ್ನು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ವಹಿಸಿದ್ದರು. ಬಿಜೆಪಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಅಡ್ವಾಣಿ 1989ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ಬಿಜೆಪಿಯ ಇಂದಿನ ವಿರಾಟ ರೂಪಕ್ಕೆ ಇವರ ಸುರಿಸಿದ ಬೆವರು ಅಪಾರ. ಪಕ್ಷ ಕಟ್ಟಲು ಹಗಲಿರುಳು ದೇಶದ ಮೂಲೆ ಮೂಲೆ ಸುತ್ತಾಡಿದ ರಾಜಕೀಯ ತಜ್ಞಘಿ. ಇಂದು ಅವರಿಗೆ ಭಾರತರತ್ನ ಘೊಷಣೆಯಾಗಿರುವುದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಇದು ಆ ವ್ಯಕ್ತಿಯ ಶಕ್ತಿ.

ಇಡೀ ದೇಶವೇ ಜ.22 ರಂದು ಅಯೋಧ್ಯೆಯ  ಶ್ರೀರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಸಂಭ್ರಮದಲ್ಲಿದ್ದರೆ ಆ ಹಿರಿಯ ಜೀವ, ರಾಮಮಂದಿರ ಹೋರಾಟದ ಮೂಲಪುರುಷ ಮನೆಯಲ್ಲಿ ಕುಳಿತು ಟಿವಿಯಲ್ಲೇ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ತೀವ್ರ ಚಳಿ ಕಾರಣಕ್ಕೆ ಅವರು ಸಮಾರಂಭಕ್ಕೆ ಬರಲಿಲ್ಲವಾದರೂ ಆ ಸಮಾರಂಭಕ್ಕೆ ಸಾಕ್ಷಿಯಾಗಬೇಕಿತ್ತು ಎನ್ನುವ ಮನದಾಸೆ ಅವರದಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈವಿಧ್ಯತೆಯನ್ನು ಗೌರವಿಸುತ್ತ ಬಂದಿದ್ದು ಅವರ ರಾಜನೀತಿಯ ವಿಶೇಷತೆ. ತಮ್ಮ ತತ್ವಘಿ, ಸಿದ್ಧಾಂತವನ್ನು ವಿರೋಧಿಸುವವರನ್ನು ಶತ್ರುಗಳೆಂದು ಪರಿಗಣಿಸಬಾರದೆಂಬುದು ಅವರ ಸ್ಪಷ್ಟೋಕ್ತಿಯಾಗಿತ್ತು. ರಾಜಕೀಯ ಪಕ್ಷಗಳು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬ ನಾಗರಿಕನ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಡಿಯಲು ಬದ್ಧರಾಗಿರಬೇಕು ಎನ್ನುವ ಅವರ ನಿಲುವು ಸಾರ್ವಕಾಲಿಕ.

ಅದೊಂದು ಕಾಲವಿತ್ತು. ಅಡ್ವಾಣಿ ಅವರ ಹೆಸರು ಕೇಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಪುಟಿದೇಳುತ್ತಿತ್ತು. ಕಾಲ ಕ್ರಮೇಣ ಈ ಹಿರಿಯ ಜೀವಿ ನೇಪಥ್ಯಕ್ಕೆ ಸರಿಯಬೇಕಾಯಿತು.ಅಡ್ವಾಣಿ ಯುಗಾಂತ್ಯವಾಗಿ ಮೋದಿ ಶಕೆ ಆರಂಭವಾಯಿತು. ಅನುಭವ ಮತ್ತು ರಾಜಕೀಯ ನಡೆ ನುಡಿಗಳಲ್ಲಿ ಅನುಕರಣೀಯರಾಗಿದ್ದ ಅಡ್ವಾಣಿ ತೆರೆಮರೆಗೆ ಸರಿದಾಗ ಒಳಗೊಳಗೆ ನೊಂದಿದ್ದುಂಟು. ಅಟಲ್ ಜಿ ನಂತರ ದ್ವಿತೀಯ ಸ್ಥಾನದ ನಂತರದಲ್ಲಿದ್ದ ಅವರು ಪ್ರಥಮ ಸ್ಥಾನಕ್ಕೆ ಬರದೇ ಇದ್ದುದು ವಿಪರ್ಯಾಸ. ಸ್ವರ್ಣಜಯಂತಿ ರಥಯಾತ್ರೆ, ಭಾರತ ಉದಯ ಯಾತ್ರೆ, ಭಾರತ ಸುರಕ್ಷಾಯಾತ್ರೆ, ಜನಚೇತನ ಯಾತ್ರೆ ಹೀಗೆ ರಥಯಾತ್ರೆಗಳ ಸರದಾರ ಲಾಲಕೃಷ್ಣ ಅವರಾಗಿದ್ದರು. ರಾಜಕೀಯ ಸೋಲುಗಳಿಗೆ ಎಂದೂ ನಿರಾಶರಾಗದ ಅಡ್ವಾಣಿಯವರಿಗೆ ತಾವು ಕಟ್ಟಿದ ಪಕ್ಷ ತಮ್ಮನ್ನು ಮೂಲೆಗಟ್ಟಿತು ಎಂಬ ಕೊರಗು ಕಾಡಿದ್ದು ಮಾತ್ರ ಸತ್ಯ
.ಜೀವನ ಪರ್ಯಂತ ಸಾರ್ವಜನಿಕ ಸೇವೆಯಲ್ಲಿ  ಸದಾ ಮುನ್ನಡೆದ  ಒಬ್ಬ ವ್ಯಕ್ತಿಗೆ ಮಾನಸಿಕವಾಗಿ ಹಿಂದೆ ಹೆಜ್ಜೆ ಇಡಬೇಕೆನ್ನುವುದು ಅಷ್ಟೊಂದು ಸುಲಭಸಾಧ್ಯವಲ್ಲ.  ಅನಿವಾರ್ಯತೆ ಒಪ್ಪಿಕೊಂಡ ನಂತರದಲ್ಲಿ ಅವರು ತೆರೆಮರೆಗೆ ಸರಿದರು. ಅನಾರೋಗ್ಯ ನೆಪವೊಡ್ಡಿ  ಹಲವು ವರ್ಷಗಳಿಂದ ದೂರ ಸರಿದಿದ್ದು ಕೂಡ ಅವರ ತಾಳ್ಮೆ, ಸಹನೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

Thursday, January 25, 2024

ಗಾಯನ ವಾದನ ಅರಣ್ಯಕುಮಾರ ಸಾಧನ


ಗಾಯನ ವಾದನ ಅರಣ್ಯಕುಮಾರ ಸಾಧನ


ಏ ಹುಡುಗ ನಿಮ್ಮಂಥವರೆಲ್ಲಾ ಪೇಟಿ(ಹಾರ್ಮೋನಿಯಂ) ಬಾರಿಸೋದು ಅಲ್ಲ ಹೋಗು ಎಂದು ಊರಿನ ನಾಟಕದ ಹಾರ್ಮೋನಿಯಂ ಮಾಸ್ತರ್ ಹೀಯ್ಯಾಳಿಸಿ ಕೊಟ್ಟ ಮಾತಿನ ಏಟು ಇಂದು ನಾಡಿಗೆ ಒಬ್ಬ ಉತ್ತಮ ಸಂಗೀತಗಾರ, ಬಹುವಾದ್ಯ ಕಲಾವಿದ ಸಿಗಲು ಕಾರಣವಾಗಿದೆ. ಅವರ ಮೂದಲಿಕೆ ಆ ಸಾಧಕನಲ್ಲಿ ಸಾಧನೆÉಯ ಕಿಚ್ಚು ಹಚ್ಚಿದ ಪರಿಣಾಮ ಸಂಗೀತದ ತವರು ಧಾರವಾಡ ಸದ್ಯಕ್ಕೆ ಡಾ. ಅರಣ್ಯಕುಮಾರ ಮುನ್ನೇನಿ ಎಂಬ ಸಂಗೀತ ಆರಾಧಕ ಬಹುವಾದ್ಯ ನುಡಿಸುವವರ ಕರ್ಮಭೂಮಿಯಾಗಿದೆ.ಅವರ ಪ್ರತಿಭೆಗೆ ವೇದಿಕೆಯಾಗಿದೆ.
  ಡಾ. ಅರಣ್ಯಕುಮಾರರಿಗೆ ಸಂಗೀತ, ವಾದ್ಯ ನುಡಿಸುವುದು ಹಿರಿಯರ ಬಳುವಳಿ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಜಮಿನಾಳದವರಾದ ಇವರ ಮುತ್ತಜ್ಜ ಶಿವಾನಂದ ಒವಿ ಬಯಲಾಟಕಾರರು, ತಂದೆ ಮಡ್ಡೆಪ್ಪ ತಾಯಿ ಸರಸ್ವತಿ ಅಧ್ಯಾತ್ಮಜೀವಿಗಳು ಹಾಗೂ ಭಜನಾಕಾರರು. ಇವರ ತಾಯಿ ತಂದೆ ಕೂಡ ವಾಯಲನಿಸ್ಟ್ ಆಗಿದ್ದರು.ಮನೆಯಲ್ಲಿ ನಿತ್ಯ ವಚನಸಂಗೀತ, ಭಜನೆ ನಡೆಯುತ್ತಿದ್ದುದು ಸಹಜವಾಗಿಯೇ ಇವರಲ್ಲಿ ಸಂಗೀತಾಭಿರುಚಿ ಚಿಗುರೊಡೆಯಲು ಕಾರಣವಾಯಿತು. ಕ್ರಮೇಣ ಅದನ್ನೇ ಜೀವನದ ಗುರಿಯಾಗಿಸಿಕೊಂಡ ಅರಣ್ಯಕುಮಾರರ ಅವಿರತ ಯತ್ನ ಅವರನ್ನು ಹಲವು ಊರುಗಳಿಗೆ ಅಲೆದಾಡಿಸಿದ್ದು ವಿಶೇಷ. ಮನೆಯಲ್ಲಿದ್ದ ಹಣ ತೆಗೆದುಕೊಂಡು ಹೋಗಿ ತಬಲಾ ಕಲಿಯಬೇಕೆಂಬ ಆಸೆಗೆ ಬಿದ್ದು ಉಡುಪಿಗೆ ಓಡಿ ಹೋದರು.ನಂತರ ಪಿಯುಸಿ ಜತೆ ಸಂಗೀತ ಕಲಿಯಲು ಗದಗಿನ ಪುಟ್ಟರಾಜ ಗವಾಯಿಗಳ ಆಶ್ರ್ರಮ ಸೇರಿದರು. ಬೆಳಗ್ಗೆ ಸಂಗೀತಾಭ್ಯಾಸ ಸಂಜೆ ಮೇಲೆ ಹೋಟೆಲ್ ಹಾಗೂ ಬಡಿಗತನದ ಕೆಲಸ. ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ಸಂಗೀತ ಬೆನ್ನುಹತ್ತಿದ ಅರಣ್ಯಕುಮಾರ ಇಂದು ನಾಡಿನ ಹೆಮ್ಮೆಯ ಕಲಾವಿದ ಹಾಗೂ ಸಂಗೀತಗಾರರಾಗಿದ್ದಾರೆ. ಬೆಳಗಾವಿಯ ಕಾದ್ರೋಳಿ ಮಠದ ಪಾಲಾಕ್ಷದೇವ ಗುರೂಜಿ ಬಳಿ ಇದ್ದಾಗ ಅವರಿಂದ ಸಿಕ್ಕ ಪ್ರೋತ್ಸಾಹ ಇವರ ತುಡಿತ ಇಮ್ಮಡಿಗೊಳಿಸಿತು. ಕಾದ್ರೋಳಿಯ ಶ್ರೀಮಂತ ಹಿನ್ನೆಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಧಾರವಾಡದಲ್ಲಿ ಮನೆ ಮಾಡಿಕೊಟ್ಟು ಅವರ ಉಸ್ತುವಾರಿ ಜತೆಗೆ ಅಡುಗೆ ಮಾಡಿ ಹಾಕಿ ತಮ್ಮ ಬದುಕು ರೂಪಿಸಿಕೊಂಡ ಅರಣ್ಯಕುಮಾರ.ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ.
ಬಹುಮುಖ ಪ್ರತಿಭೆ
ಅರಣ್ಯಕುಮಾರರದು ಬಹುಮುಖ ಪ್ರತಿಭೆ. 12 ರಿಂದ 13 ವಾದ್ಯಗಳನ್ನು ನುಡಿಸುವುದು ಇವರಿಗೆ ಕರಗತ. ಸಿತಾರ್ ನುಡಿಸುವುದರಲ್ಲಿ ಇವರದು ಎತ್ತಿದ ಕೈ. ಧಾರವಾಡದ ವಿದ್ಯಾವತಿ ವಾಜಪೇಯಿ ಅವರಿಂದ ದಿಲ್‍ರುಬಾ ಎಂಬ ಅಪರೂಪದ ವಾದ್ಯ ನುಡಿಸುವುದನ್ನು ಕಲಿತಿದ್ದಾರೆ. ಸಂಗೀತದ ಸವಿ ಇವರಲ್ಲಿ ಭದ್ರವಾಗಿ ನೆಲೆಯೂರಿದೆ.ಸಿತಾರ್ ತಂತಿಯ ಮೀಟುವಲ್ಲಿ ಪ್ರಯೋಗಗಳನ್ನು ಮಾಡುವುದು ಇವರ ವಿಶೇಷತೆ. ವಾದನ-ಗಾಯನ ಎರಡರಲ್ಲೂ ಇವರು ನಿಪುಣ.ಮನೆಯಲ್ಲಿ ಬಹುತೇಕ ವಾದ್ಯಗಳನ್ನು ಇಟ್ಟುಕೊಂಡಿದ್ದಾರೆ. ಅವುಗಳ ದುರಸ್ತಿಯನ್ನೂ ಮಾಡುತ್ತಾರೆ. ಧಾರವಾಡದ ಹಲವೆಡೆ ಸಂಗೀತ ಕ್ಲಾಸ್ ನಡೆಸುತ್ತಾರೆ ಜತೆ ಜತೆಗೆ ಕಛೇರಿಗಳಲ್ಲೂ ಭಾಗವಹಿಸುತ್ತಾರೆ. ಪುಣೆಯ ಸುಧೀರ ಫಡ್ಕೆ ಹಾಗೂ ಧಾರವಾಡದ ಉಸ್ತಾದ್ ಹಮೀದ ಖಾನ್ ಅವರ ಬಳಿ ಸಿತಾರ ಕಲಿತಿರುವ ಇವರು 2004ರಿಂದ ಪಂ.ರಾಜೀವ ತಾರಾನಾಥರ ಬಳಿ ಸರೋದ ಕಲಿಯುತ್ತಿದ್ದಾರೆ. ವಾದ್ಯ ಸಂಗೀತದ ಸಾಧನೆ ಅಪರೂಪದ್ದು ಎನ್ನುವ ಅರಣ್ಯಕುಮಾರ ಈಗಲೂ ತಡರಾತ್ರಿವರೆಗೆ ರಿಯಾಜ್ ಮಾಡುತ್ತಾರೆ. ಹಲವು ಪ್ರಯೋಗಶೀಲತೆಗೆ ತಮ್ಮನ್ನು ಒಡ್ಡಿಕೊಳ್ಳುತಿದ್ದಾರೆ. ಎಲ್ಲ ವರ್ಗದ ವಾದ್ಯಪ್ರಿಯರಿಗೆ ಅನುಕೂಲವಾಗಲೆಂದು ಕಡಿಮೆ ವೆಚ್ಚದಲ್ಲಿ ಸಿತಾರ್‍ಗಳನ್ನು ತಯಾರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸಂಗೀತ ಸರಸ್ವತಿ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಾಳೆ. ಇವರ ಬೆರಳುಗಳಲ್ಲಿ ಮಿಂಚಿನ ವೇಗವಿದೆ. ಇವರು ಸಿತಾರ್ ನುಡಿಸುತ್ತಿದ್ದಂತೆ ನೆರೆದ ಶ್ರೋತ್ರುಗಳು ಮೈಮರೆಯುತ್ತಾರೆ.
ವಿದೇಶದಲ್ಲೂ ಕಛೇರಿ
 ಸಂಗೀತದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಜತೆಗೆ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಅಲ್ಲದೇ ಕಳೆದ 13 ವರ್ಷಗಳಿಂದ ಕರ್ನಾಟಕ ಕಾಲೇಜ್‍ನ ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ(ಕನ್ನಡ ಮತ್ತು ಇಂಗ್ಲಿಷ್) ಸರಕಾರ ಪ್ರಕಟಿಸಿದ ಸಂಗೀತ ಸಂಪದ ಪುಸ್ತಕದ ಸಹ ಸಂಪಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಹಿಂದೂಸ್ತಾನಿ ಸಮಯ ರಾಗ ಪರಿಚಯ ಎಂಬ ಪುಸ್ತಕ ಕೂಡ ಬರೆದಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ಇದನ್ನು ಪ್ರಕಟಿಸಿದೆ. ಇಟಲಿ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಇವರ ಸಿತಾರ್ ಮಾಧುರ್ಯ ಅನುಸರಣಿಸಿದೆ. ರಾಷ್ಟ್ರದ ಹಲವು ವೇದಿಕೆಗಳಲ್ಲಿ ದಿಗ್ಗಜರ ಜತೆ ಜುಗಲ್‍ಬಂದಿ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಇವರ ಸಂಗೀತ ಪಯಣದ ಬಗ್ಗೆ ದೆಹಲಿ ದೂರದರ್ಶನ ಒಂದು ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ. ಆಕಾಶವಾಣಿಯಲ್ಲಂತೂ ಇವರ ಕಾರ್ಯಕ್ರಮಗಳು ನಿರಂತರ ನಡೆಯುತ್ತಲೇ ಇರುತ್ತವೆ. ಪರ್ಯಾಯವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಸಂಗೀತ ವಾದ್ಯಗಳನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಸಂಶೋಧನೆ ಮತ್ತು ಅದರ ತಯಾರಿಕೆಯಲ್ಲಿ ಪ್ರಸ್ತುತ ಇವರು ನಿರತರಾಗಿದ್ದಾರೆ.ಕಳೆದ ಒಂದು ವರ್ಷದಿಂದ ಸಾಕ್ಸೋಫೋನ್ ಮತ್ತು ವಾಯಲಿನ್ ಒಳಗೊಂಡ ಸ್ಯಾಕ್ಸೊಲಿನ್ ಎನ್ನುವ ಹೊಸ ವಾದ್ಯ ತಯಾರಿಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ರಾಷ್ಟ್ರೀಯ ಯುವಜನೋತ್ಸವದಲ್ಲಿ ಎರಡು ಬಾರಿ ಸತತವಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
  ಇವರ ಸಾಧನೆ ಅರಸಿ ಇತ್ತೀಚೆಗೆ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ ಬಂದಿದೆ. ಸಾಧನೆ ನಿತ್ಯ ನಿರಂತರ ಪ್ರಶಸ್ತಿ ಪುರಸ್ಕಾರಗಳು ಪೂರಕ ಹಾಗೂ ಪ್ರೇರಕ ಶಕ್ತಿ ಎನ್ನುವ ಅರಣ್ಯಕುಮಾರ ಸಹೃದಯದ ಕಲಾವಿದ ಕೂಡ ಹೌದು.

ಶೆಟ್ಟರ್ ಮರಳಿ ತವರಿಗೆ ಲಾಭ ಯಾರಿಗೆ?


 ಶೆಟ್ಟರ್ ಮರಳಿ ತವರಿಗೆ ಲಾಭ ಯಾರಿಗೆ?

 -ಪ್ರಸನ್ನ ಕರ್ಪೂರ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು ಗುರುವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಕೈ ಹಿಡಿದಿದ್ದ ಶೆಟ್ಟರ್ ಸರಿಯಾಗಿ 9 ತಿಂಗಳು ನಂತರ ಮತ್ತೆ ಮಾತೃಪಕ್ಷಕ್ಕೆ ಮರಳಿದ್ದಾರೆ.

ಬಿಎಸ್‌ವೈ ಮೇಲುಗೈ

 ಶೆಟ್ಟರ್ ಮರುಸೇರ್ಪಡೆ ಬೆಳವಣಿಗೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿರುವುದು ಸ್ಪಷ್ಟ ಮತ್ತು ಬಿಜೆಪಿ ಮುಖಂಡ ಬಿ.ಎಲ್. ಸಂತೋಷ ಅವರಿಗೆ ಹಿನ್ನಡೆ ಎನ್ನುವುದು ಕೂಡ ಸ್ಪಷ್ಟ.  ಎಲ್ಲಕ್ಕಿಂತ ಮೇಲಾಗಿ ಮರು ಸೇರ್ಪಡೆ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರ ಅನುಪಸ್ಥಿತಿಯೂ ಎದ್ದು ಕಂಡಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಮಧ್ಯೆ ಧಾರವಾಡ ಹಾಲಿ ಸಂಸದ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮುಂದಿನ ನಡೆ ಕಾದು ನೋಡಬೇಕಿದೆ. ಮೇಲ್ನೋಟಕ್ಕೆ ಸಚಿವ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಶಾಸಕ ಟೆಂಗಿನಕಾಯಿ ಆದಿಯಾಗಿ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಿದ್ದೇವೆ. ವರಿಷ್ಠರು ಅಳೆದು ತೂಗಿ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರ ಕೈ ಗೊಳ್ಳುತ್ತಾರೆ ಎಂದು ಹೇಳಿದರೂ ಒಳಗುಟ್ಟು ಬೇರೆನೇ ಇದೆ ಎನ್ನುವ ಪಿಸು ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಶೆಟ್ಟರ್ ಘರವಾಪ್ಸಿ ಎಷ್ಟು ಜನರಿಗೆ ಇಷ್ಟ? ಮುಕ್ತ ಮನಸ್ಸಿನಿಂದ ಎಷ್ಟು ಜನ ಸ್ವಾಗತಿಸುತ್ತಾರೆ? ಎನ್ನುವುದು ಈಗಿರುವ ಪ್ರಶ್ನೆ. ಶೆಟ್ಟರ್ ಮರಳಿ ಪಕ್ಷಕ್ಕೆ ಇಂದಿಲ್ಲಾ ನಾಳೆ ಬಂದೇ ಬರುತ್ತಾರೆ ಎನ್ನುವ ವಿಶ್ವಾಸ ಬಿಜೆಪಿಯವರಿಗೆ ಇತ್ತುಘಿ. ಅದಕ್ಕೆಂದೇ ಬಿಜೆಪಿ ಅಸೆಂಬ್ಲಿ ಚುನಾವಣೆಯಲ್ಲಿ ಅವರನ್ನು ಹೀನಾಯವಾಗಿ ಸೋಲಿಸಿತು. ಆ ಮೂಲಕ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಇದು ಕಾರ್ಯಕರ್ತರ ಪಕ್ಷಘಿ. ಅವರೇ ಪಕ್ಷದ ಶಕ್ತಿ . ಪಕ್ಷದ ಚಿನ್ಹೆಯಡಿ ಯಾರೇ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬುದನ್ನು ಲಿತಾಂಶದ ಮೂಲ ಸಾರುವಲ್ಲಿ ಯಶಸ್ವಿಯಾಗಿತ್ತು.

ಶಂಕರ ಪಾಟೀಲರ ಕಾರ್ಯಾಚರಣೆ

ಶೆಟ್ಟರ್ ಮರುಸೇರ್ಪಡೆಯಿಂದ ಬಿಜೆಪಿಗೆ ಅದರಲ್ಲೂ ಪ್ರಲ್ಹಾದ ಜೋಶಿ ಅವರಿಗೆ ಪ್ಲಸ್ ಆಗುವುದೇ? ಹಿಂದೆ ಒಂದೊಮ್ಮೆ ಜೋಡೆತ್ತಿನಂತಿದ್ದ  ಶೆಟ್ಟರ್ ಜೋಡಿ ಅಗಲಿದ್ದು ಸಾಕಷ್ಟು ಚರ್ಚೆಯಾಗಿತ್ತು. ಹು-ಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನಿರಾಕರಣೆ ಮುಂದಿಟ್ಟುಕೊಂಡು ಪಕ್ಷ ತೊರೆದಿದ್ದ ಶೆಟ್ಟರ್ ಪ್ರಲ್ಹಾದ ಜೋಶಿ ಅವರ ವರ್ತನೆ ಬಗ್ಗೆಯೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರದ ದಿನಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗ್ದಾಳಿಯೂ ನಡೆದಿತ್ತು. ಇನ್ನೊಂದೆಡೆ ಮಾಜಿ ಸಚಿವ ಶಂರ ಪಾಟೀಲ ಮುನೇನಕೊಪ್ಪ ಕೂಡ ಬಿಜೆಪಿ ತೊರೆಯುತ್ತಾರೆ ಎಂಬ ನಿರೀಕ್ಷೆ ಇತ್ತುಘಿ. ಕೆಲ ದಿನಗಳ ಹಿಂದೆ ನಡೆದ ಮೂರು ರಾಜ್ಯಗಳ ಚುನಾವಣಾ ಲಿತಾಂಶದಿಂದ ತಮ್ಮ ನಿರ್ಧಾರ ಬದಲಿಸಿದ್ದಲ್ಲದೇ ಶೆಟ್ಟರ್ ಹಿಂದೆ ಹೆಜ್ಜೆ ಹಾಕದೇ ಶೆಟ್ಟರನ್ನೇ ತವರಿಗೆ ಮರಳಿ ತರುವಲ್ಲಿ ಶಂಕರ ಪಾಟೀಲ ಯಶಸ್ವಿಯಾಗಿದ್ದಾರೆ. 

ಸದ್ಯಕ್ಕೆ ಪಕ್ಷ ಸೇರ್ಪಡೆ ಬಗ್ಗೆ ಮಾತ್ರ ಮಾತನಾಡಿರುವ ಶೆಟ್ಟರ್ ಮರುಸೇರ್ಪಡೆಗೆ ಏನಾದರೂ ಷರತ್ತು ಹಾಕಿದ್ದಾರಾ? ಧಾರವಾಡ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ಕೇಳಿದ್ದಾರಾ? ಎನ್ನುವ ಸಂಗತಿಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಶೆಟ್ಟರ್ ಅವರನ್ನು ಹಾವೇರಿ ಇಲ್ಲವೇ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಿಸುವ ವಿಚಾರ ವರಿಷ್ಠರ ಮುಂದಿದೆಯಾ? ಇನ್ನೊಂದು ಮೂಲಗಳ ಪ್ರಕಾರ ಪ್ರಲ್ಹಾದ ಜೋಶಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿ ಜತೆಗೆ ರಾಜ್ಯಸಭೆ ಸದಸ್ಯರನ್ನಾಗಿಯೂ ಮಾಡುವ ಆಲೋಚನೆ ಹೈ ಕಮಾಂಡ್ ನದ್ದಾಗಿದೆ. ಧಾರವಾಡ ಕ್ಷೇತ್ರದಿಂದ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಶೆಟ್ಟರ್ ಘರ ವಾಪ್ಸಿ ಹಲವು ಬೆಳವಣಿಗೆಗಳಿಗೆ ಮುನ್ನುಡಿ ಬರೆದಿದೆ. ಇದೇ ವೇಳೆ ಶೆಟ್ಟರ್ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಎಷ್ಟು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ? ಮೊದಲಿನಂತೆಯೇ ಅಪ್ಪಿಕೊಳ್ಳುವುರಾ?ಗತವೈಭವ ಮರಕಳಿಸವುದೇ ಕಾದು ನೋಡಬೇಕಿದೆ.

ಬೆಳಗಾವಿ ಎಂಪಿ ಟಿಕೆಟ್ ಆಕಾಂಕ್ಷಿಗಳ ತಳಮಳ

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಉಂಟುಮಾಡಿದೆ. ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಒಪ್ಪಂದದೊಂದಿಗೇ ಬಿಜೆಪಿಗೆ ಮರಳಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.  ಹುಬ್ಬಳ್ಳಿ-ಧಾರವಾಡ, ಹಾವೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಒಪ್ಪಂದೊಂದಿಗೆ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ್ದಾರೆ ಎನ್ನಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಭಾವಿಯಾಗಿರುವುದರಿಂದ ಅವರ ಜತೆ ಜಗದೀಶ ಶೆಟ್ಟರ್ ಟಿಕೆಟ್ ೈಟ್ ನಡೆಸುವ ಸಾಧ್ಯತೆ ಕಡಿಮೆ. ಇನ್ನು, ಹಾವೇರಿ ಕ್ಷೇತ್ರದಲ್ಲಿ ಶೆಟ್ಟರ್ ಹೆಚ್ಚು ಪ್ರಭಾವ ಹೊಂದಿಲ್ಲ, ಹಾಗಾಗಿ ಅಲ್ಲಿ ಸ್ಪರ್ಧಿಸಿದರೆ ವರ್ಕೌಟ್ ಆಗಲಿಕ್ಕಿಲ್ಲ ಆತಂಕವೂ ಇದೆ. ಈ ಕಾರಣ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.