Friday, January 21, 2011

ಬೆಲೆ ಕುಸಿತಕ್ಕೆ ಬೆಚ್ಚಿಬಿದ್ದ ಬತ್ತ, ತೊಗರಿ ಬೆಳೆಗಾಗರರು


* ನಿರೀಕ್ಷೆಗೂ ಮೀರಿ ಬೆಳೆ ಬಿತ್ತಿ ಬೆಲೆ ಇಲ್ಲದೆ ಕಂಗಾಲಾದ ರಾಯಚೂರು, ಬಳ್ಳಾರಿ ರೈತರು
* ಊಪಯೋಗಕ್ಕೆ ಬಾರದ ಖರಿದಿ ಕೇಂದ್ರಗಳು


ಬೇಸಾಯವೇ ಬದುಕು ಅಂದುಕೊಂಡು ಸಾಲ ಸೂಲ ಮಾಡಿ ಬಿತ್ತಿದ ಬೆಳೆಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಬತ್ತ ಹಾಗು ತೊಗರಿ ಬೆಳೆಗಾರರೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ವರ್ಷದುದ್ದಕ್ಕೂ ಬೆವರು ಸುರಿಸಿ ಮಾಡಿದ ಕೃ ನಿರೀಕ್ಷಿ ಫಲ ನೀಡದೇ ಹೋದ ಕಾರಣ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಪರಿಸ್ಥಿತಿ ಇವರದ್ದಾಗಿದೆ. ಬದಲಾಗಿ ಯೋಚಿಸಿ ಬಿತ್ತನೆ ಮಾಡಿದ್ದಾದಲ್ಲಿ ಬೆಳೆ ಹಾನಿ ಆತಂಕ ಹಾಗೂ ಬೆಲೆ ಕುಸಿತದ ಭೀತಿಂದ ತಪ್ಪಿಸಿಕೊಳ್ಳಬಹುದಿತ್ತೇನೋ. ಆದರೂ ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ಖರೀದಿ ಕೆಂದ್ರಗಳಲ್ಲಿ ಉತ್ತಮ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಅನ್ನದಾತನ ಆಸರೆಗೆ ಮುಂದಾಗಬೇಕಿದೆ.




ಬಹುಶ: ನಮ್ಮ ನಾಡಿನ ರೈತರ ಹಣೆಬರಹವೇ ಸರಿ ಇದ್ದ ಹಾಗಿಲ್ಲ. ಒಮ್ಮೆ ಅತೀವ್ಟಷ್ಟಿ ಇನ್ನೊಮ್ಮೆ ಅನಾವ್ಟಷ್ಟಿ . ಪರಿಣಾಮ ಬಿತ್ತಿದ ಬೆಳೆ ನಾಶ. ಮೈ ತುಂಬಾ ಸಾಲ. ಇಲ್ಲವೇ ನೆರೆ ಗೋವಾಕ್ಕೋ ಅಥವಾ ಮಹಾರಾಷ್ಟ್ರಕ್ಕೊ ಗಾರೆ ಕೆಲಸಕ್ಕೆ ಗುಳೆ ಹೋಗೋದು. ಹೌದು ಉತ್ತರ ಕರ್ನಾಟಕದ ರೈತರು ಪ್ರಕೃತಿ ವಿಕೋಪ ಹಾಗೂ ಬೆಲೆ ಕುಸಿತದಿಂದ ತತ್ತರಿಸಿದ್ದಾರೆ. ಅದರಲ್ಲೂ ಬತ್ತ ಬೆಳೆದ ಬಳ್ಳಾರಿ ಹಾಗೂ ತೊಗರಿ ಬೆಳೆದ ರಾಯಚೂರು ಜಿಲ್ಲೆಯ ರೈತರ ಗೋಳಂತೂ ಹೇಳತೀರದು. ಬೆಲೆ ಕುಸಿತ ಭೀತಿಂದ ಮುಂದೇನು ಎಂಬ ಚಿಂತೆ ಇವರನ್ನು ಆವರಿಸಿದೆ.
ತೇವಾಂಶ ತಂದ ತೊಂದರೆ: ಗಡಿಜಿಲ್ಲೆ ಬಳ್ಳಾರಿ ಬಹುತೇಕ ರೈತರು ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿದ ಪರಿಣಾಮ ಬತ್ತ ಬೆಳೆಯುತ್ತಾರೆ. ಮುಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಬತ್ತ ಬಿತ್ತಿರುವ ರೈತರೀಗ ಬೆಳೆದ ಧಾನ್ಯಕ್ಕೆ ಉತ್ತಮ ಬೆಲೆ ಇಲ್ಲದ ಕಾರಣ ನಿರಾಶರಾಗಿದ್ದಾರೆ. ಈಲ್ಲೆಯ ಅಂದಾಜು ೭೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತಲಾಗಿತ್ತು. ಈಲ್ಲೆಯ ಸಿರಗುಪ್ಪ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂ"ನಹಡಗಲಿ, ಸಂಡೂರು, ಕೂಡ್ಲಿಗಿಯಲ್ಲಿ ಇದರಲ್ಲಿ ಈಗಾಗಲೇ ಅರ್ಧಕ್ಕಿಂತು ಹೆಚ್ಚು ಬೆಳೆ ಕಟಾವು ಮಾಡಲಾಗಿದೆ. ಗೋದಾಮುಗಳಲ್ಲಿ ಸಂಗ್ರಹ ಮಾಡಿದ್ದು ಬಿಟ್ಟರೆ ಮುಂದೆ ಯಾವ ಕೆಲಸವೂ ಆಗಿಲ್ಲ. ಕೆಲವೆಡೆ ಬತ್ತ ಸಂಗ್ರಹಿಸಲು ಗೋದಾಮುಗಳಿಲ್ಲದಿರುವುದು ಮತ್ತೊಂದು ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಎಲ್ಲಿದಕ್ಕಿಂತ ಹೆಚ್ಚಾಗಿ ತೇವಾಂಶ ಹೆಚ್ಚಾಗಿರುವುದು ರೈತರ ಆತಂಕ ಹೆಚ್ಚಿಸಿದೆ. ಸರ್ಕಾರದಿಂದ ಸ್ಥಾಪನೆಯಾದ ಬತ್ತ ಖರೀದಿ ಕೆಂದ್ರಗಳಲ್ಲಿ ಇಂತಹ ಬತ್ತವನ್ನು ನೋಡುವವರೂ ಇಲ್ಲದಂತಾಗಿದೆ. ವ್ಯಾಪಾರಸ್ಥರು ತೇವಾಂಶ ಹೆಚ್ಚಿರುವ ಈ ಬತ್ತ ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಬತ್ತ ಮಾರಾಟವಾಗದೇ ಹಾಗೆ ಉಳಿಯುವ ಆತಂಕ ರೈತರದ್ದಾಗಿದೆ.
ಅತ್ತ ಸರ್ಕಾರ ಬತ್ತಕ್ಕೆ ಬೆಂಬಕ ಬೆಲೆ ಏನೋ ಘೋಷಿಸಿ ಕೈ ತೊಳೆದುಕೊಂಡಿದೆ. ಆದರೆ ಇದೇ ಸರ್ಕಾರದ ವತಿಂದ ತೆರೆಯಲಾದ ಬತ್ತ ಖರೀದಿ ಕೆಂದ್ರಗಳಲ್ಲಿ ತೇವಾಂಶ ಕಡಿಮೆ ಕಾರಣವೊಡ್ಡಿ ಹಾಗೂ ಈ ಕೇಂದ್ರಗಳು ಹಟ್ಟಣ ಹಾಗೂ ತಾಲೂಕು ಕೆಂದ್ರಗಳಿಗೆ ಮಾತ್ರ ಸೀಮಿತವಾಗಿರುವುದು ಬೆಳೆಗಾರರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ದೂರದ ಖರೀದಿ ಕೆಂದ್ರಕ್ಕೆ ಬೆಳೆ ತೆಗೆದುಕೊಂಡು ಹೋದರೂ ಅಲ್ಲಿ ಮಾರಾಟವಾಗದಿದ್ದಲ್ಲಿ ಬಂದು ಹೋದ ಖರ್ಚು ಸಹ ಮೈ ಮೇಲೆ. ಮೊದಲೇ ಹಣಕಾಸಿನ ಬಿಕ್ಕಟ್ಟು ಇಂತಹದರಲ್ಲಿ ಈ ಸಮಸ್ಯೆ ಎದುರಾದರೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ರೈತರೂಸಹ ಕಳೆದ ತಿಂಗಳು ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ ನಡೆಸಿದ್ದರು. ದಾವಣಗೆರೆ ಬಂದ್ ಸಹ ಆಚರಿಸಲಾಗಿತ್ತು. ಕಳೆದ ಬಾರಿಯ ಬೆಂಬಲ ಬೆಲೆ ೧೫೦೦ ರು.ಅನ್ನು ಈ ಬಾರಿಯೂ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಸರ್ಕಾರದ ಬೆಂಬಲ ಬೆಲೆಂದ ಉತ್ತೇಜಿತರಾದ ರೈತರು ಸಿಕ್ಕಾಪಟ್ಟೆ ಬಿತ್ತನೆ ಮಾಡಿ ಇದೀಗ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.
ತೊಗರಿ ತಾಪತ್ರಯ: ಇನ್ನು ರಾಯಚೂರು ಜಿಲ್ಲೆಯ ರೈತರ ಗೋಳೇನು ಭಿನ್ನವಾಗಿಲ್ಲ. ಈ ಜಿಲ್ಲೆಯಲ್ಲೂ ಬತ್ತ ಪ್ರಮುಖ ಬೆಳೆಯಾಗಿದ್ದು, ಇದರ ಜೊತೆಗೆ ಬೆಳೆಯುವ ಇನ್ನೊಂದು ಬೆಳೆ ತೊಗರಿಗೂ ಬೆಲೆ ಕುಸಿತದ ಭೀತಿ ಎದುರಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಕಳೆದ ವರ್ಷದ ತೊಗರಿ ಬೆಲೆ ನೋಡಿದ ರೈತರು ಹಿಂದೆ ಮುಂದೆ ಯೋಚಿಸದೆ ಹಿಗ್ಗಾ ಮುಗ್ಗಾ ತೊಗರಿ ಬೆಳೆದಿದ್ದಾರೆ. ವಾಡಿಕೆಗಿಂತ ಹೆಚ್ಚಿಗೆ ತೊಗರಿ ಬೆಳೆಯಲಾಗಿದ್ದು ಈಗ ಬೆಲೆ ಕುಸಿದಿರುವುದು ರೈತರ ಸಮಸ್ಯೆ ಇಮ್ಮಡಿಸಿದೆ. ಏನಿಲ್ಲೆ ಅಂದರೂ ಜಿಲ್ಲೆಯ ಸುಮಾರು ೧ ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಇದಕ್ಕೆ ಪೂರಕವಾಗಿ ಮಳೆರಾಯನೂ ಉತ್ತಮ ಕೃಪೆ ತೋರಿದ ಕಾರಣ ಫಸಲು ಚೆನ್ನಾಗಿಯೇ ಬಂದಿದೆ. ಎಕರೆಗೆ ೬ ರಿಂದ ೭ ಕ್ವಿಂಟಾಲ್ ನಿರೀಕ್ಷೆ ರೈತರದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಪ್ರಸ್ತುತ ೨ ರಿಂದ ೩೫೦೦ ವರೆಗೆ ಬೆಲೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲೂ ಬೆಲೆ ಏರುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಬದಲಾಗಿ ದರ ಇಳಿಯುವ ಸಾಧ್ಯತೆಗಳೇ ಹೆಚ್ಚು.
ಇನ್ನು ರೈತರ ನೆರವಿಗೆಂದು ಕೇಂದ್ರ ಸರ್ಕಾರ ೩೦೦೦ ರು. ದರ ನಿಗದಿಗೊಳಿಸಿದೆ. ಆದರೆ ಈ ದರದನ್ವಯ ಖರಿದಿಸುವವರೇ ಇಲ್ಲದಂತಾಗಿದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ದರದಲ್ಲಿ ವ್ಯಾಪಾರಸ್ಥರು ತೊಗರಿ ಖರಿದಿಸುತ್ತಿರುವುದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ಇದೆಲ್ಲದರ ಪರಿಣಾಮ ಮತ್ತೆ ಹೋರಾಟಕ್ಕಿಳಿಯುವ ಯೋಚನೆ ಯೊಂದೇ ರೈತರದ್ದಾಗಿದೆ. ಅಲ್ಲದೇ ಅನಿವಾರ್ಯತೆಯೂ ಹೌದು. ನಿರೀಕ್ಷೆಗೂ ಮೀರಿ ತೊಗರಿ ಬೆಳೆದು ಬತ್ತದ ಬೆಳೆಗಾರರ ತರಹವೇ ಬೆಲೆ ಕುಸಿತ ಭಿತಿ ಎದುರಿಸುತ್ತಿರುವ ರೈತರ ಗೋಳು ಶೋsಚನೀಯವಾಗಿದೆ.

ಅರಭಾವಿ:ಬಿದ್ದೀತೆ ಬಾಲಚಂದ್ರಗೆ ಬ್ರೇಕ್

* ಬಾಲಚಂದ್ರರ ಬಾಲ ಕತ್ತರಿಸಲು ಸಜ್ಜಾದ ಬಿಜೆಪಿ
* ಸಚಿವ ಉಮೇಶ್‌ಕತ್ತಿ, ಲಕ್ಷ್ಮಣ ಸವದಿ ಆದಿಯಾಗಿ ಕ್ಷೇತ್ರದಲ್ಲೇ ಬೀಡು

ಗೋಕಾಕ್ ಎಂದಾಕ್ಷಣ ಒಂದು ಥಟ್ಟನೆ ಹೊಳೆಯೋದು ಫಾಲ್ಸ್ ಮತ್ತೊಂದು ಜಾರಕಿಹೊಳಿ ಕುಟುಂಬ. ಹೌದು ಇವೆರಡೂ ಗೋಕಾಕ್‌ನ್ನು ಪ್ರತನಿಧಿಸುವ ಎರಡು ಅಂಶಗಳು.ಒಂದು ತನ್ನ ಸಹಜ ಸೊಗಡಿನಿಂದ ಜನರ ಸ್ಮತಿಪಟಲದಲ್ಲಿ ಛಾಪು ಮೂಡಿಸಿದ್ದರೆ ಇನ್ನೊಂದು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಗುರ್ತಿಸಿಕೊಂಡಿದ್ದಾರೆ. ಗೋಕಾಕ್ ತಾಲೂಕನ್ನು ತಮ್ಮ ಕುಟುಂಬದ ಕಪಿಮ್ಠುಯಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ತಾಲೂಕಿನ ರಾಜಕೀಯವಷ್ಟೇ ಏಕೆ ರಾಜ್ಯ ರಾಜಕಾರಣದಲ್ಲೂ ಅಷ್ಟೇ. ಇಂತಹ ರಾಜಕೀಯ ಜಿದ್ದಾಜಿದ್ದಿಯ ತಾಲೂಕಿನಲ್ಲೀಗ ಜಿಲ್ಲಾ ಹಾಗೂ ಪಂಚಾತಿ ಚುನಾವಣೆ ಕಾವು ರಂಗೇರಿದೆ. ಒಂದು ಕಾಲದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಬೆಂಬಲಿಸಿ ಸಚಿವ ಸ್ಥಾನ ಪಡೆದು ಈಗ ಸಿಎಂ ವಿರುದ್ಧ ಸೆಡ್ಡು ಹೊಡೆದ ಬಾಲಚಂದ್ರ ಜಾರಕಿಹೊಳಿ ಸ್ಥಳಿಯರಾಗಿರುವುದರಿಂದ ಪರಿಣಾಮ ಈ ಚುನಾವಣೆ ಭಾರೀ ಕುತೂಹಲ ಪಡೆದಿದೆ.
ಜಿದ್ದಾಜಿದ್ದಿನ ರಾಜಕೀಯ: ಮೊದಲಿನಿಂದಲೂ ತಾಲೂಕಿನ ರಾಜಕೀಯ ಚಿತ್ರಣ ಅವಲೋಕಿಸಿದರೆ ಜಾರಕಿಹೊಳಿ ಕುಟುಂಬದ ಹಿಡಿತದ ಪ್ರಮಾಣ ಗೊತ್ತಾಗುತ್ತದೆ. ಸ್ಥಳಿಯ ಸಂಸ್ಥೆಗಳಿಂದ ಹಿಡಿದು ಗ್ರಾಮ ಪಂಚಾತಿಯಲ್ಲೂ ಈ ನಾಲ್ವರು ಜಾರಕಿಹೊಳಿ ಬೆಂಬಲಿಗರೇ ಅನ್ನೋದು ವಿಶೇಷ.ನಾಲ್ವರೂ ತಮ್ಮದೇ ಆದ ಬೆಂಬಲಿಗರ ಪಡೆ ಹೊಂದಿದ್ದು ಹಲವೆಡೆ ಪರಸ್ಪರ ವಿರುದ್ಧವಾಗಿ ಸೆಣಸಿದ್ದೂ ಉಂಟು. ಸತೀಶ್ ಜಾರಕಿಹೊಳಿ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿದ್ದಾರೆ. ಇನ್ನು ಬಾಲಚಂದ್ರ ಜಾರಕಿಹೊಳಿ ಈ ಹಿಂದೆ ಜೆಡಿಎಸ್ ಮಧ್ಯೆ ಬಿಜೆಪಿ ಸೇರಿ ಸಿಎಂ ವಿರುದ್ದ ಸಿಡಿದೆದ್ದು ಶಾಸಕತ್ವದಿಂದ ಅನರ್ಹಗೊಂಡು ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸುತ್ತಿದ್ದಾರೆ.ಇವರ ಪಕ್ಕಾ ಬೆಂಬಲಿಗರಾದ ಡಾ. ರಾಜೆಂದ್ರ ಸಣ್ಣಕ್ಕಿ ಮತ್ತಿತರರು ಈ ಬಾರಿ ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸಿದ್ದು ಬಾಲಚಂದ್ರ ಇವರನ್ನು ಬೆಂಬಲಿಸುತ್ತಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ವಚಸ್ಸು ಹೊಂದಿರುವ ಬಾಲಚಂದ್ರ ಹಾಗೂ ಇವರ ಬೆಂಬಲಿಗರನ್ನು ಸೋಲಿಸುವುದು ಕಷ್ಟದ ಮಾತೇ ಆದರೂ ಅಸಾಧ್ಯವೇನಲ್ಲ.ಇದಕ್ಕೆ ಪೂರಕವೆನ್ನುವಂತೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಸಂಸದ ಸುರೇಶ್ ಅಂಗಡಿ ಅರಭಾವಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು ಬಾಲಚಂದ್ರರನ್ನು ಸ್ವಲ್ಪ ದೃತಿಗೆಡಿಸಿದೆ. ಇನ್ನು ಕಳೆದ ಬಾರಿ ಗೋಕಾಕ್ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಂದ ಸ್ಪರ್ಧಿಸಿ ಸೋತಿದ್ದ ಡಾ. ಭೀಮಶಿ ಜಾರಕಿಹೊಳಿ ಸಹ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.ಇನ್ನು ಜೆಡಿಎಸ್ ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಮತ್ತು ಅರವಿಂದ ದಳವಾ ಜೆಡಿಎಸ್‌ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಸಕ್ಕರೆ ರಾಜಕಾರಣ: ತಾಲೂಕಿನಲ್ಲಿ ಒಟ್ಟು ೧೧ ಜಿ.ಪಂ ಸ್ಥಾನಗಳಿದ್ದು ಅದರಲ್ಲಿ ೬ ಸ್ಥಾನಗಳು ಅರಭಾವಿ ಕ್ಷೇತ್ರದಲ್ಲಿ ಬರುತ್ತವೆ ಇನ್ನು ಒಟ್ಟು ೪೧ ತಾಲೂಕು ಪಂಚಾ ಸ್ಥಾನಗಳಲ್ಲಿ ಅರಭಾವಿಗೆ ೨೨ ಸ್ಥಾನಗಳು ಬರುತ್ತವೆ.ಶತಾಯಗತವಾಗಿ ಬಾಲಚಂದ್ರರ ಬೆಂಬಲಿಗರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅರಭಾವಿಯಿಂದಲೇ ಪ್ರಚಾರ ಪ್ರಾರಂಭಿಸಿದ್ದು ವಿಶೇಷವಾಗಿದೆ. ತಾಲೂಕಿನ ಘಟಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನದಿಂದಿ ಇಳಿದಿರುವ ಬಾಲಚಂದ್ರರ ಜಾಗಕ್ಕೀಗ ಇವರ ಸಹೋದರ ಲಖನ್ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ. ಇನ್ನು ತೀರಾ ಇತ್ತೀಚೆಗೆ ಈ ಸಕ್ಕರೆ ಕಾರ್ಖಾನೆ ಯ ಕೆಲ ಆಡಳಿತ ಮಂಡಳಿಯವರ‍್ನು ಸಿಬಿಐ ನವರು ಬಂಧಿಸಿದ್ದಾರೆ. ಸಚಿವರಾಗಿದ್ದಾಗ ಸರ್ಕಾರದಿಂದ ಕಾರ್ಖಾನೆ ಪುನಶ್ಚೇತನಕ್ಕಾಗಿ ಸಾಕಷ್ಟು ಅನುದಾನ ಪಡೆದಿದ್ದ ಬಾಲಚಂದ್ರರು ಇದರ ಏಳಿಗೆಗೆ ಶ್ರಮಿಸಿದ್ದು ಅಷ್ಟೇ ಎಂಬ ಆರೋಪವೂ ಇದೆ.ಇವರು ಸತೀಶ್ ಜಾರಕಿಹೊಳಿಯವರ ಜೊತೆ ಇದ್ದು ಬಾಲಚಂದ್ರರಿಗು ಇವರಿಗೂ ಅಷ್ಟಕ್ಕಷ್ಟೆ. ಇತ್ತೀಚೆಗಷ್ಟೇ ಬಾಲಚಂದ್ರ ಈಗಾಗಲೇ ಕ್ಷೇತ್ರಕ್ಕೆ ಬಂದು ಹಲವೆಡೆ ಬಹಿರಂಗ ಪ್ರಚಾರ ಸಭೆಯಲ್ಲಿ ಪರೋಕ್ಷವಾಗಿ ಬಾಲಚಂದ್ರರನ್ನು ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಇನ್ನು ಇವರ ಇನ್ನೊಬ್ಬ ಸಹೋದರ ಸತೀಶ್ ಜಾರಕಿಹೊಳಿಯವರೊಡನೆ ಇವರ ಸಂಬಂಧ ಸರಿಇಲ್ಲದ ಕಾರಣ ಅವರೂ ಸಹ ಬಾಲಚಂದ್ರರಿಗೆ ಕಡಿವಾಣ ಹಾಕಲು "ಂದೇಟು ಹಾಕುವುದಿಲ್ಲ ಎಂದೇ ಹೇಳಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ಅರಭಾವಿ ಕ್ಷೇತ್ರದ ಜಿಲ್ಲಾ ಹಾಗೂ ತಾಲೂಕು ಪಂಚಾತಿ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ.ಒಂದೆಡೆ ಬಿಜೆಪಿ ಸರ್ಕಾರಕ್ಕೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅಷ್ಟೇ ಪ್ರತಿಷ್ಟೆ ಬಾಲಚಂದ್ರರಿಗೂ ಇದೆ.ಇನ್ನು ಮತದಾರ ಯಾವ ನಿಧಾರ ಕೈ ಗೊಳ್ಳುತ್ತಾನೆ ಅಂತಾ ಕಾದು ನೊಡಬೇಕು.