* ಬಾಲಚಂದ್ರರ ಬಾಲ ಕತ್ತರಿಸಲು ಸಜ್ಜಾದ ಬಿಜೆಪಿ
* ಸಚಿವ ಉಮೇಶ್‌ಕತ್ತಿ, ಲಕ್ಷ್ಮಣ ಸವದಿ ಆದಿಯಾಗಿ ಕ್ಷೇತ್ರದಲ್ಲೇ ಬೀಡು
ಗೋಕಾಕ್ ಎಂದಾಕ್ಷಣ ಒಂದು ಥಟ್ಟನೆ ಹೊಳೆಯೋದು ಫಾಲ್ಸ್ ಮತ್ತೊಂದು ಜಾರಕಿಹೊಳಿ ಕುಟುಂಬ. ಹೌದು ಇವೆರಡೂ ಗೋಕಾಕ್‌ನ್ನು ಪ್ರತನಿಧಿಸುವ ಎರಡು ಅಂಶಗಳು.ಒಂದು ತನ್ನ ಸಹಜ ಸೊಗಡಿನಿಂದ ಜನರ ಸ್ಮತಿಪಟಲದಲ್ಲಿ ಛಾಪು ಮೂಡಿಸಿದ್ದರೆ ಇನ್ನೊಂದು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಗುರ್ತಿಸಿಕೊಂಡಿದ್ದಾರೆ. ಗೋಕಾಕ್ ತಾಲೂಕನ್ನು ತಮ್ಮ ಕುಟುಂಬದ ಕಪಿಮ್ಠುಯಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ತಾಲೂಕಿನ ರಾಜಕೀಯವಷ್ಟೇ ಏಕೆ ರಾಜ್ಯ ರಾಜಕಾರಣದಲ್ಲೂ ಅಷ್ಟೇ. ಇಂತಹ ರಾಜಕೀಯ ಜಿದ್ದಾಜಿದ್ದಿಯ ತಾಲೂಕಿನಲ್ಲೀಗ ಜಿಲ್ಲಾ ಹಾಗೂ ಪಂಚಾತಿ ಚುನಾವಣೆ ಕಾವು ರಂಗೇರಿದೆ. ಒಂದು ಕಾಲದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಬೆಂಬಲಿಸಿ ಸಚಿವ ಸ್ಥಾನ ಪಡೆದು ಈಗ ಸಿಎಂ ವಿರುದ್ಧ ಸೆಡ್ಡು ಹೊಡೆದ ಬಾಲಚಂದ್ರ ಜಾರಕಿಹೊಳಿ ಸ್ಥಳಿಯರಾಗಿರುವುದರಿಂದ ಪರಿಣಾಮ ಈ ಚುನಾವಣೆ ಭಾರೀ ಕುತೂಹಲ ಪಡೆದಿದೆ.
ಜಿದ್ದಾಜಿದ್ದಿನ ರಾಜಕೀಯ: ಮೊದಲಿನಿಂದಲೂ ತಾಲೂಕಿನ ರಾಜಕೀಯ ಚಿತ್ರಣ ಅವಲೋಕಿಸಿದರೆ ಜಾರಕಿಹೊಳಿ ಕುಟುಂಬದ ಹಿಡಿತದ ಪ್ರಮಾಣ ಗೊತ್ತಾಗುತ್ತದೆ. ಸ್ಥಳಿಯ ಸಂಸ್ಥೆಗಳಿಂದ ಹಿಡಿದು ಗ್ರಾಮ ಪಂಚಾತಿಯಲ್ಲೂ ಈ ನಾಲ್ವರು ಜಾರಕಿಹೊಳಿ ಬೆಂಬಲಿಗರೇ ಅನ್ನೋದು ವಿಶೇಷ.ನಾಲ್ವರೂ ತಮ್ಮದೇ ಆದ ಬೆಂಬಲಿಗರ ಪಡೆ ಹೊಂದಿದ್ದು ಹಲವೆಡೆ ಪರಸ್ಪರ ವಿರುದ್ಧವಾಗಿ ಸೆಣಸಿದ್ದೂ ಉಂಟು. ಸತೀಶ್ ಜಾರಕಿಹೊಳಿ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿದ್ದಾರೆ. ಇನ್ನು ಬಾಲಚಂದ್ರ ಜಾರಕಿಹೊಳಿ ಈ ಹಿಂದೆ ಜೆಡಿಎಸ್ ಮಧ್ಯೆ ಬಿಜೆಪಿ ಸೇರಿ ಸಿಎಂ ವಿರುದ್ದ ಸಿಡಿದೆದ್ದು ಶಾಸಕತ್ವದಿಂದ ಅನರ್ಹಗೊಂಡು ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸುತ್ತಿದ್ದಾರೆ.ಇವರ ಪಕ್ಕಾ ಬೆಂಬಲಿಗರಾದ ಡಾ. ರಾಜೆಂದ್ರ ಸಣ್ಣಕ್ಕಿ ಮತ್ತಿತರರು ಈ ಬಾರಿ ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸಿದ್ದು ಬಾಲಚಂದ್ರ ಇವರನ್ನು ಬೆಂಬಲಿಸುತ್ತಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ವಚಸ್ಸು ಹೊಂದಿರುವ ಬಾಲಚಂದ್ರ ಹಾಗೂ ಇವರ ಬೆಂಬಲಿಗರನ್ನು ಸೋಲಿಸುವುದು ಕಷ್ಟದ ಮಾತೇ ಆದರೂ ಅಸಾಧ್ಯವೇನಲ್ಲ.ಇದಕ್ಕೆ ಪೂರಕವೆನ್ನುವಂತೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಸಂಸದ ಸುರೇಶ್ ಅಂಗಡಿ ಅರಭಾವಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು ಬಾಲಚಂದ್ರರನ್ನು ಸ್ವಲ್ಪ ದೃತಿಗೆಡಿಸಿದೆ. ಇನ್ನು ಕಳೆದ ಬಾರಿ ಗೋಕಾಕ್ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಂದ ಸ್ಪರ್ಧಿಸಿ ಸೋತಿದ್ದ ಡಾ. ಭೀಮಶಿ ಜಾರಕಿಹೊಳಿ ಸಹ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.ಇನ್ನು ಜೆಡಿಎಸ್ ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಮತ್ತು ಅರವಿಂದ ದಳವಾ ಜೆಡಿಎಸ್‌ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಸಕ್ಕರೆ ರಾಜಕಾರಣ: ತಾಲೂಕಿನಲ್ಲಿ ಒಟ್ಟು ೧೧ ಜಿ.ಪಂ ಸ್ಥಾನಗಳಿದ್ದು ಅದರಲ್ಲಿ ೬ ಸ್ಥಾನಗಳು ಅರಭಾವಿ ಕ್ಷೇತ್ರದಲ್ಲಿ ಬರುತ್ತವೆ ಇನ್ನು ಒಟ್ಟು ೪೧ ತಾಲೂಕು ಪಂಚಾ ಸ್ಥಾನಗಳಲ್ಲಿ ಅರಭಾವಿಗೆ ೨೨ ಸ್ಥಾನಗಳು ಬರುತ್ತವೆ.ಶತಾಯಗತವಾಗಿ ಬಾಲಚಂದ್ರರ ಬೆಂಬಲಿಗರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅರಭಾವಿಯಿಂದಲೇ ಪ್ರಚಾರ ಪ್ರಾರಂಭಿಸಿದ್ದು ವಿಶೇಷವಾಗಿದೆ. ತಾಲೂಕಿನ ಘಟಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನದಿಂದಿ ಇಳಿದಿರುವ ಬಾಲಚಂದ್ರರ ಜಾಗಕ್ಕೀಗ ಇವರ ಸಹೋದರ ಲಖನ್ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ. ಇನ್ನು ತೀರಾ ಇತ್ತೀಚೆಗೆ ಈ ಸಕ್ಕರೆ ಕಾರ್ಖಾನೆ ಯ ಕೆಲ ಆಡಳಿತ ಮಂಡಳಿಯವರ‍್ನು ಸಿಬಿಐ ನವರು ಬಂಧಿಸಿದ್ದಾರೆ. ಸಚಿವರಾಗಿದ್ದಾಗ ಸರ್ಕಾರದಿಂದ ಕಾರ್ಖಾನೆ ಪುನಶ್ಚೇತನಕ್ಕಾಗಿ ಸಾಕಷ್ಟು ಅನುದಾನ ಪಡೆದಿದ್ದ ಬಾಲಚಂದ್ರರು ಇದರ ಏಳಿಗೆಗೆ ಶ್ರಮಿಸಿದ್ದು ಅಷ್ಟೇ ಎಂಬ ಆರೋಪವೂ ಇದೆ.ಇವರು ಸತೀಶ್ ಜಾರಕಿಹೊಳಿಯವರ ಜೊತೆ ಇದ್ದು ಬಾಲಚಂದ್ರರಿಗು ಇವರಿಗೂ ಅಷ್ಟಕ್ಕಷ್ಟೆ. ಇತ್ತೀಚೆಗಷ್ಟೇ ಬಾಲಚಂದ್ರ ಈಗಾಗಲೇ ಕ್ಷೇತ್ರಕ್ಕೆ ಬಂದು ಹಲವೆಡೆ ಬಹಿರಂಗ ಪ್ರಚಾರ ಸಭೆಯಲ್ಲಿ ಪರೋಕ್ಷವಾಗಿ ಬಾಲಚಂದ್ರರನ್ನು ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಇನ್ನು ಇವರ ಇನ್ನೊಬ್ಬ ಸಹೋದರ ಸತೀಶ್ ಜಾರಕಿಹೊಳಿಯವರೊಡನೆ ಇವರ ಸಂಬಂಧ ಸರಿಇಲ್ಲದ ಕಾರಣ ಅವರೂ ಸಹ ಬಾಲಚಂದ್ರರಿಗೆ ಕಡಿವಾಣ ಹಾಕಲು "ಂದೇಟು ಹಾಕುವುದಿಲ್ಲ ಎಂದೇ ಹೇಳಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ಅರಭಾವಿ ಕ್ಷೇತ್ರದ ಜಿಲ್ಲಾ ಹಾಗೂ ತಾಲೂಕು ಪಂಚಾತಿ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ.ಒಂದೆಡೆ ಬಿಜೆಪಿ ಸರ್ಕಾರಕ್ಕೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅಷ್ಟೇ ಪ್ರತಿಷ್ಟೆ ಬಾಲಚಂದ್ರರಿಗೂ ಇದೆ.ಇನ್ನು ಮತದಾರ ಯಾವ ನಿಧಾರ ಕೈ ಗೊಳ್ಳುತ್ತಾನೆ ಅಂತಾ ಕಾದು ನೊಡಬೇಕು.
No comments:
Post a Comment