ಆಫ್ ಬೀಟ್ ಚಿತ್ರಗಳ ಬೇಡಿಕೆ ಇನ್ನೂ ಕುಗ್ಗಿಲ್ಲ. ಅವುಗಳಿಗೆ ತನ್ನದೇ ಆದ ಪ್ರೇಕ್ಷಕವರ್ಗ ಮತ್ತು ಮೆಚ್ಚುವವರಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 60 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೊಷಣೆಯಾಗಿದ್ದು ಶಿವಾಜಿ ಲೋಟನ್ ಪಾಟೀಲ ನಿದರ್ೇಶಿಸಿದ ಧಾಗ್ ಮರಾಠಿ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸಹಜ ಹಾಗೂ ಸಮರ್ಥ ನಟನೆಯಿಂದ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿರುವ ಕೊಲ್ಹಾಪುರ ಮೂಲದ ನಟಿ ಉಷಾ ಜಾಧವ್ ಆ ಮೂಲಕ ರಾಷ್ಟ್ರದ ಗಮನಸೆಳೆದಿದ್ದಾಳೆ. ಈ ಹಿಂದೆ ಹಲವು ಚನಚಿತ್ರೋತ್ಸವದಲ್ಲೊ ಪ್ರದರ್ಶನ ಕಂಡ ಈ ಚಿತ್ರ ನೋಡಿದ ಹಲವರು ಸಹಜ ನಟನೆಗೆ ಖ್ಯಾತಳಾಗಿದ್ದ ನಟಿ ದಿ. ಸ್ಮಿತಾ ಪಾಟೀಲಳಿಗೆ ಹೋಲಿಸಿದ್ದು ವಿಶೇಷ.
ಯಶೋದೆಗೆ ಯಶಸ್ಸಿನ ಗುರಿ
ಮಾಝಾ ಸಪ್ನಾಂನಾ ಮಯರ್ಾದಾ ನಾಹಿತ್... ನನ್ನ ಕನಸುಗಳಿಗೆ ಯಾವುದೇ ಬೆಲೆಯಿಲ್ಲ. ಅತ್ಯುತ್ತಮ ನಟನಾ ಸಾಮಥ್ರ್ಯ ಹೊರಗೆಡವಬೇಕೆಂಬುದು ನನ್ನ ಅಭಿಲಾಷೆ. ಹೀಗೆಂದು ತನ್ನ ಕನಸುಗಳು ಇನ್ನೂ ಬಲವಾಗಿವೆ ಸಾಧಿಸಿದ್ದು ಸಾಸಿವೆಯಷ್ಟು ಸಾಧಿಸುವುದು ಸಾಗರದಷ್ಟು ಎಂದು ಸೂಚ್ಯವಾಗಿ ಹೇಳಿದ್ದು ಉಷಾ ಜಾಧವ್. ಎಸ್ ಈ ಉಷಾ ಜಾಧವ ಬೇರಾರೂ ಅಲ್ಲ. ಮೊನ್ನೆಯಷ್ಟೇ ಘೊಷಣೆಯಾದ 60 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಯುವ ಪ್ರತಿಭಾವಂತೆ.
ಹಾಗಂತ ಕೊಲ್ಹಾಪುರದ ಈ ಪೋರಿ ಯಾವುದೇ ನಟನಾ ಹಿನ್ನೆಲೆಯ ಕುಟುಂಬದಿಂದ ಬಂದಿಲ್ಲ. ಅಕಾಡೆಮಿಕ್ ಆಗಿ ಯಾವುದೇ ರಂಗಶಾಲೆಯಲ್ಲೋ ಅಥವಾ ಇನ್ನ್ಯಾರದೋ ಗರಡಿಯಲ್ಲಿ ಪಳಗಿದವಳು ಅಲ್ಲ. ಈಕೆಯದು ಏನಿದ್ದರೂ ಸಹಜ ಅಷ್ಟೇ ಸಮರ್ಥ ನಟನೆ. ಶಾಲಾ ದಿನಗಳಲ್ಲಿ ನಟನೆಯ ಕನಸು ಕಂಡಾಕೆ. 7 ನೇ ತರಗತಿಯಲ್ಲಿದ್ದಾಗಿನಿಂದಲೇ ವೇದಿಕೆ ಮೇಲೆ ಬಣ್ಣ ಹಚ್ಚಿದ ಅನುಭವ ಮುಂದೊಂದು ದಿನ ಇಡೀ ರಾಷ್ಟ್ರವೇ ಗುರುತಿಸುವ ಹಾಗೆ ಮಾಡಿದ್ದು ಸಾಧನೆಯೇ ಸರಿ. ಶಾಲೆಯಲ್ಲಿ ಸಿಕ್ಕ ಪ್ರಶಸ್ತಿ ಇವಳಲ್ಲಿ ನಟನೆಯ ಗೀಳು ಹೆಚ್ಚಿಸಿತು. ಕುಳಿತರೂ ನಿಂತರೂ ಅದರದ್ದೇ ಧ್ಯಾನ. ಈ ಹವ್ಯಾಸ ಅಥವಾ ಗೀಳು ಬೆನ್ನತ್ತಿದ ಉಷಾ ಹಿಂದಿರುಗಿ ನೋಡಿದ್ದೇ ಇಲ್ಲ. ಹೆಚ್ಚಿನ ಅವಕಾಶಕ್ಕಾಗಿ ವಾಣಿಜ್ಯನಗರಿ ಮುಂಬೈಗೆ ಪಾದಾರ್ಪಣೆ ಮಾಡಿದ ಉಷಾ ತನ್ನ ಕನಸುಗಳಿಗೆ ಜೀವ ತುಂಬುವ ಯತ್ನ ಮಾಡಿದಳು. ಈ ಪ್ರತಿಭೆಯನ್ನು ಗುರುತಿಸಿದ್ದು ಮಧು ಭಂಡಾರಕರ್. ಹೌದು ಖ್ಯಾತ ನಿದರ್ೇಶಕ, ನಿಮರ್ಾಪಕ ಮಧು ಭಂಡಾರಕರ್ ತಮ್ಮ ಚಿತ್ರ ಟ್ರಾಫಿಕ್ ಸಿಗ್ನಲ್ ನಲ್ಲಿ ಈಕೆಗೆ ಹೂವಿನಮಾಲೆ ಮಾರುವವಳ ಪಾತ್ರ ಕೊಟ್ಟರು.ಅಲ್ಲಿಂದ ಶುರುವಾಯ್ತು ನೋಡಿ ಇವಳ ಸಿನಿಮಾಯಾನ. ನಂತರ ಬಂದ ಸ್ಟ್ರೈಕರ್ ಎನ್ನುವ ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಸಿದ್ಧಾರ್ಥನ ಜತೆ ನಟಿಸಿದಳು. ಬರೀ ಹಿಂದಿ ಚಿತ್ರಗಳಲ್ಲಿ ಮಾತ್ರವಲ್ಲದೇ ಮರಾಠಿ ಚಿತ್ರಗಳಲ್ಲೂ ಈಕೆಗೆ ಅವಕಾಶ ದೊರೆಯಲಾರಂಭಿಸಿದವು. ಖ್ಯಾತ ನಿದರ್ೇಶಕ ಅರುಣ್ ನಲವಡೇಯವರ ಬಾಯಿ ಮಣೂಸ್, ಏಕ್ ಸಾತ್ ಫ್ರೀ ಮತ್ತು ಧಾಗ್ ನಂತಹ ಚಿತ್ರ ಈಕೆಯ ಪ್ರತಿಭೆಯನ್ನು ಹೊರಹಾಕುವಲ್ಲಿ ಯಶಸ್ವಿಯಾದವು.
ಉಷಾ ಬರೀ ಸಿನೆಮಾಗಳಲ್ಲಿ ಮಾತ್ರವಷ್ಟೇ ಅಲ್ಲ. ಜಾಹೀರಾತುಗಳಲ್ಲೂ ಮಿಂಚಿದಾಕೆ.ಕೌನ್ ಬನೇಗಾ ಕರೋಡಪತಿ ಪ್ರೊಮೋ , ಫೆವಿಕಾಲ್ ಮೂಚವಾಲಿ, ರಿನ್ ಸೋಪ್, ಹೆಡ್ ಆ್ಯಂಡ್ ಶೋಲ್ಡರ್ಸ್ ಸೇರಿದಂತೆ ಹಲವು ಕಮಷರ್ಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಾಕೆ. ಕೌನ ಬನೇಗಾ ಕರೋಡಪತಿಯ ಪ್ರೊಮೋದಲ್ಲಿ ಈಕೆಯ ಕಂಠದಿಂದ ಹೊರಹೊಮ್ಮುತ್ತಿದ್ದ ಮುಬಾರಕ್ ಹೊ ಲಡಕಿ ಹುವಾ ಹೈ ಎಂಬ ಸಂಭಾಷಣೆ ಎಲ್ಲರ ಗಮನಸೆಳೆದಿತ್ತು. ಸಹಜ ನಟನೆಗೆ ಹೆಸರುವಾಸಿಯಾಗಿದ್ದ ದಿವಂಗತ ನಟಿ ಸ್ಮೀತಾ ಪಾಟೀಲರ ಉತ್ತರಾಧಿಕಾರಿ ಎಂದೇ ಉಷಾಳನ್ನು ಬಿಂಬಿಸಲಾಗುತ್ತಿದೆ. ಇನ್ನು ಈಕೆ ನಟಿಸಿದ ಗಾಲಿ ಎನ್ನುವ ಟೆಲಿಫಿಲ್ಮ್ನ ಹವಾ ಅಂತೂ ಕೇಳಲೇ ಬೇಡಿ. ಯೂ ಟ್ಯುಬ್ನಲ್ಲಂತೂ ಬರೀ ಗಾಲಿಯದ್ದೇ ಸುದ್ದಿ ಮತ್ತು ನೋಡುಗರ ಸಂಖ್ಯೆಯೂ ಅಷ್ಟೇ .
ಕೈಹಿಡಿದ ಯಶೋಧಾ ಪಾತ್ರ:
ಧಾಗ್ ಚಿತ್ರದಲ್ಲಿನ ಯಶೋಧಾ ಪಾತ್ರದ ಮನೋಜ್ಞ ಅಭಿನಯಕ್ಕಾಗಿ ಉಷಾ ಜಾಧವ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಚಿತ್ರದಲ್ಲಿ ಯಶೋಧಾ ಒಬ್ಬ ಹಿಂದುಳಿದ ಹಾಗೂ ಸ್ಮಶಾನ ಕಾಯುವ, ಅಂತ್ಯಕ್ರಿಯೆ ನಡೆಸುವ ಕಾಯಕ ಕುಟುಂಬದ ಗೃಹಿಣಿಯಾಗಿರುತ್ತಾಳೆ. ಹೆಣ ಸುಡುವ ಕಾಯಕ ಪತಿ ಶ್ರೀಪತಿಯದ್ದು . ತಲತಲಾಂತರದಿಂದ ಇದು ಇವರ ಕುಟುಂಬಕ್ಕೆ ಬಂದ ಬಳುವಳಿ. ಮಗ ಕೃಷ್ಣ ಇದಕ್ಕೆ ಒಪ್ಪುವುದಿಲ್ಲ. ಯಶೋದಾಳಿಗೂ ಈ ವೃತ್ತಿ ಬೇಕಾಗಿರುವುದಿಲ್ಲ. ಮಗ ಕೃಷ್ಣ ಓದಿ ದೊಡ್ಡ ಆಫಿಸರ್ ಆಗಬೇಕೆನ್ನುವ ಮಹದಾಸೆ ಆಕೆಯದು. ಆದರೆ ಕೃಷ್ಣ ಅಜ್ಜಿ ಕಟ್ಟಾ ಸಂಪ್ರದಾಯವಾದಿ. ಅಪ್ಪ ನೆಟ್ಟ ಆಲದಮರ ಎಂಬಂತೆ ಮಗನೂ ಅದೇ ವೃತ್ತಿ ನಡೆಸಲಿ ಎನ್ನುವಾಕೆ.ಶಾಲೆ, ಓದಿನ ಗೊಡವೆ ಬೇಡ ಹೊಟ್ಟೆಪಾಡಿನ ಬಗ್ಗೆ ಗಮನ ಕೊಡು ಎನ್ನುವ ಪ್ರವೃತ್ತಿ ಅವಳದು. ಕೃಷ್ಣ ತಂದೆಯ ವೃತ್ತಿ ಮುಂದುವರಿಸದೇ ಏನು ಮಾಡಬೇಕೆಂಬುದು ತೋಚದೇ ಶಾಲೆಗೂ ಚಕ್ಕರ್ ಹಾಕುತ್ತಾ ಕಾಲ ಕಳೆಯುತ್ತಾನೆ. ಇದಕ್ಕಾಗಿ ತಾಯಿ ಯಶೋದಾಳಿಂದ ಒದೆತವನ್ನೂ ತಿನ್ನುತ್ತಾನೆ. ಒಂದೊಮ್ಮೆ ತಂದೆ ಶ್ರೀಪತಿ ಹಾವು ಕಚ್ಚಿ ಸಾವನ್ನಪ್ಪುತ್ತಾನೆ. ಈ ಘಟನೆ ಕೃಷ್ಣ ಜೀವನದಲ್ಲಿ ಹೊಸ ತಿರುವು ಕೊಡುತ್ತದೆ. ಕೃಷ್ಣಾ ಸ್ನೇಹಿತನ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸುತ್ತಾನೆ. ಪಾರಂಪರಿಕ ವೃತ್ತಿಗೆ ತಿಲಾಂಜಲಿ ಕೊಡುತ್ತಾನೆ. ಪತಿಯ ಕಾಯಕ ಮುಂದುವರಿಸಲು ಯಶೋಧಾ ಮುಂದಾದರೂ ಸಮಾಜ ಅದಕ್ಕೆ ಅವಕಾಶ ಕೊಡುವುದಿಲ್ಲ. ತುತ್ತಿನ ಚೀಲ ತುಂಬಿಸೋದು ಹೇಗೆ ಎನ್ನುವ ಚಿಂತೆಯಲ್ಲಿರುವಾಗ ಆಪದ್ಬಾಂಧವನಂತೆ ಬರುತ್ತಾನೆ ಶ್ರೀಪತಿ ಸ್ನೇಹಿತ ಮಂಗ್ಯಾ. ಆದರೆ ಈ ಸಹಾಯದ ಹಿಂದೆ ಯಶೋದಾನ ಮೇಲಿನ ಆಸೆಯ ಕಣ್ಣಿರುತ್ತದೆ. ಈ ವಿಷಯ ಕೃಷ್ಣ ನಿಗೆ ತಿಳಿದಿದ್ದೇ ತಡ ಒಲ್ಲದ ಮನಸ್ಸಿನಿಂದಾದರೂ ಸೈ ಮಂಗ್ಯಾನ ತಪ್ಪಿಸಲು ಹೆಣ ಸುಡುವ ಕಾಯಕ್ಕೆ ಮರಳುತ್ತಾನೆ. ಓದು ಮುಗಿಯುವವರೆಗೆ ಕುಟುಂಬದ ರಕ್ಷಣೆಗಾಗಿ ತಂದೆಯ ಹಾದಿ ತುಳಿಯುತ್ತಾನೆ. ಒಂದೆಡೆ ಮಗನ ಭವಿಷ್ಯ ಇನ್ನೊಂದೆಡೆ ಪತಿ ಕಳೆದುಕೊಂಡು ಕುಟುಂಬ ನಿರ್ವಹಣೆಯ ಜವಾಬ್ದಾರಿ. ಈ ಎರಡೂ ಸನ್ನಿವೇಶಗಳಿಗೆ ತಕ್ಕನಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಯಶೋದಾ ಪಾತ್ರಕ್ಕೆ ಜೀವ ತುಂಬಿದ್ದು ಉಷಾ ಜಾಧವ್. ಕೆಳವರ್ಗದ ಬಡ ಕುಟುಂದ ಗೃಹಿಣಿಯಾಗಿ ಸಮಾಜ ಹೇರಿದ ಕಟ್ಟುಪಾಡಿನ ಮಧ್ಯೆ ಬದುಕಿನ ಜತೆಗಿನ ಸೆಣಸಾಟವನ್ನು ಸಮರ್ಪಕವಾಗಿ ತೋರಿಸಿಕೊಟ್ಟ ಖ್ಯಾತಿ ಉಷಾಳದ್ದು. ಪ್ರೇಕ್ಷಕರಿಗೆ ನೈಜ ಯಶೋಧಾಳನ್ನೇ ಕಣ್ಣೆದುರಿಗೆ ಕಟ್ಟಿಕೊಟ್ಟ ಹಾಗೆ ನಟಿಸಿದ್ದು ಉಷಾ. ಈ ಅತ್ಯುತ್ತಮ ನಟನೆ ವ್ಯರ್ಥವಾಗಲಿಲ್ಲ. ಈ ಪಾತ್ರ ಉಷಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಅರಸಿ ಬರುವ ಹಾಗೆ ಮಾಡಿತು.
-ಕೋಟ್.........
ನಾನೇನು ವಿಶೇಷ ಪ್ರಯತ್ನ ಮಾಡಿಲ್ಲ. ಎಂದಿನಂತೆ ಸಹಜ ನಟನೆಯನ್ನೇ ಮುಂದುವರಿಸಿದೆ. ಧಾಗ್ನಂತಹ ಚಿತ್ರದಲ್ಲಿನ ಪಾತ್ರಗಳೆಂದರೆ ನನಗೆ ಅಚ್ಚುಮೆಚ್ಚು.ಇಂತಹ ಇನ್ನೂ ಹೆಚ್ಚಿನ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ

No comments:
Post a Comment