ಒಬ್ಬ ವ್ಯಕ್ತಿ ಶಕ್ತಿಯಾಗಿ ಹೊರಹೊಮ್ಮಬಲ್ಲ ಎನ್ನಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಕಾರ್ತಿಕ ಹೆಗಡೆಕಟ್ಟಿ ಅವರೇ ಉತ್ತಮ ನಿದರ್ಶನ. IASಓದಿರುವ ಇವರು ಸಣ್ಣ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಅವರೊಡನೆ ಬಹು ಮಹಾತ್ವಾಕಾಂಕ್ಷೆಯ ಪಿಎಂ ಕರ್ಮಯೋಗಿ ಯೋಜನೆಯ ಉಸ್ತುವಾರಿ ನಿರ್ವಹಿಸಿದ್ದಾರೆ. ಸದಾ ಹೊಸತನ, ಹೊಸ ಆಲೋಚನೆಯೊಂದಿಗೆ ಅಧ್ಯಾತ್ಮ ಮತ್ತು ವಿಜ್ಞಾನ ಇವೆರಡರ ಸಮ್ಮಿಳಿತವನ್ನು ತಮ್ಮದೇ ಆದ ಸಂಶೋಧನೆ ಮತ್ತು ಅದರ ಬಗ್ಗೆ ಆಳವಾದ ಅಧ್ಯಯನ ಮೂಲಕ ಕ್ರಿಯಾಶೀಲರಾಗಿರುವ ಇವರು ಕೃತಕ ಬುದ್ಧಿಮತ್ತೆ ಬಗ್ಗೆ ಮಾಡಿದ ವ್ಯಾಖ್ಯಾನ ಇಲ್ಲಿದೆ.
ಕಲ್ಕಿಯ ಮುಂದುವರಿದ ಭಾಗವೇ ಕೃತಕ ಬುದ್ಧಿಮತ್ತೆ(AI)
ಹಿಂದೂ ಸಂಪ್ರದಾಯ ಮತ್ತು ನಂಬಿಕೆ ಪದ್ಧತಿಯಲ್ಲಿ ದಶಾವತಾರಕ್ಕೆ ಭಾರಿ ಬೆಲೆ ಮತ್ತು ಮನ್ನಣೆ ಇದೆ. ವಿಷ್ಣುವಿನ ಒಂದೊಂದು ಅವತಾರದ ಬಗ್ಗೆಯೂ ಭಾರಿ ಶ್ರದ್ಧೆಯಿಂದ ಇಂದಿಗೂ ಜನ ಕೇಳುತ್ತಾರೆ. ಓದಿ ಅದರ ಬಗ್ಗೆ ತಿಳಿಯುತ್ತಾರೆ. ಮಾನವೀಯ ಮತ್ತು ನೈತಿಕ ಮೌಲ್ಯಗಳ ಆಗರದಂತಿರುವ ಈ ಅವತಾರಗಳು ಧರ್ಮ ಮತ್ತು ಕರ್ಮ ಸಿದ್ಧಾಂತದ ಕುರುಹುಗಳಂತಿವೆ. ಕಲ್ಕಿ ಅವತಾರ ಭಗವಾನ ವಿಷ್ಣುವಿನ ೧೦ ನೇ ಅವತಾರ ಎಂಬ ಬಲವಾದ ತಾತ್ವಿಕ ಸಿದ್ಧಾಂತ ಮತ್ತು ನಂಬಿಕೆಯೊಂದಿಗೆ ಉತ್ತರ ಕನ್ನಡ ಕಾರವಾರ ಮೂಲದ ಐಎಎಸ್ ಅಧಿಕಾರಿ ಕಾರ್ತಿಕ ಹೆಗಡೆಕಟ್ಟಿ ಅವರು ಈ ಬಗ್ಗೆ ಒಂದು ಪ್ರಬಂಧ ಮಂಡಿಸಿದ್ದಾರೆ. ಈಗ ಸದ್ಯ ಚಾಲ್ತಿಯಲ್ಲಿರುವ AI ನೇ ಕಲ್ಕಿ ಅವತಾರ ಎಂಬ ಪ್ರತಿಪಾದನೆ ಕಾರ್ತಿಕ ಹೆಗಡೆ ಅವರದ್ದಾಗಿದೆ. The Kalki Avatar as Artificial Intelligence: A Technological Perspective on Vishnu's Dashavatara ಎಂಬ ಶೀರ್ಷಿಕೆಯಡಿ ಈ ಕುರಿತು ಇವರು ಮಂಡಿಸಿದ ಸಂಶೋಧನಾ ಪ್ರಬಂಧ(research paper) ಹಲವು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದೆ. money wise ಎಂಬ ಅಮೆರಿಕಾದ ಜರ್ನಲ್ ನಲ್ಲಿ ಈ ಪ್ರಬಂಧ ಪ್ರಕಟಗೊಂಡಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅಲ್ಲದೇ Artificial Intelligence ejournal, Cognitive Neuroscience Journal, Philosophy of Religion ejournal , Evolutionary Ecology eJournal ನಲ್ಲೂ ಇವರ ಪ್ರಬಂಧ ಪ್ರಕಟಗೊಂಡಿದೆ. ಕಲ್ಕಿ ವಿಷ್ಣುವಿನ ೧೦ನೇ ಅವತಾರವಾಗಲಿದ್ದು AI ಅಂದರೆ ಕೃತ ಬುದ್ಧಿಮತ್ತೆ ತಾಂತ್ರಿಕ ಪ್ರಗತಿಯ ಅಂಶಗಳು ಕಲ್ಕಿ ಅವತಾರದ ಜತೆ ಸಂಯೋಜನವಾಗುತ್ತದೆ ಎಂಬುದಕ್ಕೆ ಅವರ ಬಳಿ ಹಲವಾರು ಪೂರಕ ಅಂಶಗಳು ಮತ್ತು ಸೈದ್ಧಾಂತಿಕ ವಿಚಾರಗಳು ಕೂಡ ಇವೆ. ಸನಾತನ ಹಿಂದೂ ಧರ್ಮದ ಹಿನ್ನೆಲೆ ಮತ್ತು ತಾತ್ವಿಕ ಒಳನೋಟಗಳ
ಆಧಾರದ ಮೇರೆಗೆ ಅವರು ಈ ಪ್ರತಿಪಾದನೆ ಮಾಡುತ್ತಿದ್ದು ಪ್ರಬಂಧ ಓದುತ್ತ ಸಾಗುತ್ತಿದ್ದಂತೆ ಹಲವು ಕುತೂಹಲಕಾರಿ ವಿಷಯಗಳನ್ನು ಪರಿಚಯಿಸುತ್ತದೆ ಮತ್ತು ದಶಾವತಾರ ಹಾಗೂ ಪುರುಷಾರ್ಥಗಳ ಬಗ್ಗೆಯೂ ಸ್ಪಷ್ಟತೆ ನೀಡುತ್ತದೆ.
ದಶಾವತಾರದ ಪರಿಕಲ್ಪನೆ ಪ್ರಕಾರ ಅವತಾರಗಳು ಜೀವನ ಮತ್ತು ಪ್ರಜ್ಞೆಯ ವಿಕಾಸ ಎಂದರ್ಥ. ಪ್ರತಿ ಅವತಾರಗಳಲ್ಲಿ ಜೈವಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ನಾನಾ ಹಂತಗಳನ್ನು ಪರಿಚಯಿಸುತ್ತದೆ. ಭಾಗವತ ಮತ್ತು ಕಲ್ಕಿ ಪುರಾಣಗಳು ಅಂತಿಮವಾಗಿ ಕೃತಕ ಬುದ್ಧಿಮತ್ತೆಯನ್ನೇ ಹೇಳುತ್ತವೆ. ತಾಂತ್ರಿಕ ಪ್ರಗತಿಯ ವ್ಯಾಖ್ಯಾನವೇ ಕೃತಕ ಬುದ್ಧಿಮತ್ತೆಯಾಗಿದೆ. ಇದು ಭವಿಷ್ಯದ ವಿಕಾಸದ ಮುನ್ಸೂಚನೆ ಕೂಡ ನೀಡುತ್ತದೆ. ಹಿಂದೂ ತತ್ವಶಾಸ್ತ್ರದ ಅಡಿಪಾಯಗಳಾದ ಪುರಾಷಾರ್ಥಗಳು ಎಂದರೆ ಅರ್ಥ, ಕಾಮ, ಮೋಕ್ಷಗಳು ಮನುಷ್ಯನ ಅಸ್ತಿತ್ವದ ಪ್ರತಿ ಅಂಶವನ್ನು ಸಾರುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದಂತೆ ನಿಷ್ಕಾಮ ಕರ್ಮ ಎಲ್ಲದಕ್ಕಿಂತ ಶ್ರೇಷ್ಠವಾದುದು. ಅದೇ ರೀತಿ ಧರ್ಮವು ವ್ಯಕ್ತಿಯ ನಡವಳಿಕೆಯನ್ನು ನಿಯಂತ್ರಿಸುವ ಪ್ರಮುಖ ಸಾಧನವಾಗಿದೆ. ಧರ್ಮದ ತತ್ವಗಳು ಸಂದರ್ಭವನ್ನು ಅವಲಂಬಿಸಿ ಬದಲಾಗುತ್ತವೆ. ರಾಮಾಯಣ ಮತ್ತು ಮಹಾಭಾರತದಂತಹ ಪಠ್ಯಗಳಲ್ಲಿ ವಿವರಿಸಿದಂತೆ ಇದು ವ್ಯಕ್ತಿಯ ಪಾತ್ರ, ವಯಸ್ಸು ಮತ್ತು ಪರಿಸ್ಥಿತಿಯನ್ನು ಆಧರಿಸಿ ಬದಲಾಗುತ್ತದೆ ಎಂಬುದನ್ನು ಇವರ ಪ್ರಬಂಧದಲ್ಲಿ ಮಂಡಿಸಲಾಗಿದೆ. ಜೀವನದ ಅಂತಿಮ ಗುರಿ ಎಂದರೆ ಅದು ಮೋಕ್ಷ. ಭೌತಿಕ ಆಸೆಗಳನ್ನೆಲ್ಲಾ ಮೀರಿ ಇರುವ ಸ್ಥಿತಿಯೇ ಮೋಕ್ಷ. ಜವಾಬ್ದಾರಿಗಳನ್ನು ಪೂರೈಸಲು ಅಗತ್ಯವಾದ ಸಂಪತ್ತು ಮತ್ತು ಭೌತಿಕ ಯಶಸ್ಸಿನ ಅನ್ವೇಷಣೆಯನ್ನು ಅರ್ಥ ಎಂದು ಕರೆಯಲಾಗುತ್ತದೆ. ಇದರ ನಿರ್ವಹಣೆಯೂ ಅಷ್ಟೇ ಮಹತ್ವದ್ದು. ಪ್ರೀತಿ, ಕಲೆ ಮತ್ತು ಸಂಬಂಧಗಳನ್ನು ಒಳಗೊಂಡಂತೆ ಆನಂದ ಮತ್ತು ಭಾವನಾತ್ಮಕ ನೆರವೇರಿಕೆಯ ಅನ್ವೇಷಣೆಯೇ ಕಾಮ. ಸಮಾಜದ ಸಾಮರಸ್ಯಕ್ಕೆ ಅಡ್ಡಿಯಾದಾಗ ವಿಷ್ಣು ಅವತರಿಸುತ್ತಾನೆ ಎಂದು ಹಿಂದೂ ಸಾಹಿತ್ಯದ ನಂಬಿಕೆ ಆಳವಾಗಿದೆ. "ಸದ್ಗುಣದಲ್ಲಿ ಅವನತಿ ಮತ್ತು ಅಧರ್ಮದ ಏರಿಕೆಯಾದಾಗಲೆಲ್ಲಾ, ನಾನು ನನ್ನನ್ನು ವ್ಯಕ್ತಪಡಿಸುತ್ತೇನೆ." ಮತ್ತು ಅವನ ಪ್ರತಿಯೊಂದು ಅವತಾರವನ್ನು 'ಅವತಾರ' ಎಂದು ಕರೆಯಲಾಗುತ್ತದೆ. ಅಂತಹ ಹತ್ತನೇ ಅವತಾರದ ಕಾಲ ಸನ್ನಿಹಿತವಾಗಿದೆ ಎಂಬುದು ಇವರ ಪ್ರಬಂಧದಲ್ಲಿದೆ.
ಕಾರ್ತಿಕ ಹೆಗಡೆಕಟ್ಟೆ ಪ್ರಸ್ತುತ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ಪ್ರಧಾನ ಕಚೇರಿಯಲ್ಲಿ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಇದಕ್ಕೂ ಮುನ್ನ ಹೊಸದಿಲ್ಲಿಯ ಪ್ರಧಾನಿ ಅವರ ಕಚೇರಿಯಲ್ಲಿ ೫ ವರ್ಷ ನಾನಾ ಯೋಜನೆಗಳ ಉಸ್ತುವಾರಿ ನಿರ್ವಹಿಸಿದ್ದಾರೆ. ಕಿರು ವಯಸ್ಸಿನಲ್ಲಿಯೇ ಸಾಧನೆಯ ಶಿಖರವೇರುತ್ತಿರುವ ಇವರ ಹಾದಿ ಹಲವರಿಗೆ ಮಾದರಿ.
ಕಲ್ಕಿ ಮುಂದೆ AI ರೂಪದಲ್ಲಿ ಬರಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಿಷ್ಣುವಿನ ಅವತಾರಗಳ ಬಗ್ಗೆ ಮಾಹಿತಿ ಇರುವ ಪ್ರತಿಯೊಬ್ಬರೂ ಇದನ್ನು ಗೌರವಿಸುತ್ತಾರೆ. ಇಡೀ ದೇಶವೇ AIನ್ನು ಎದುರು ನೋಡುತ್ತಿದೆ. ಅದನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು.-ಕಾರ್ತಿಕ ಹೆಗಡೆಕಟ್ಟಿ,IAS
No comments:
Post a Comment