Thursday, January 13, 2011

ಅಕ್ರಮ ಮರಳುಗಾರಿಕೆಗೆ ಬರಿದಾಗುತ್ತಿರುವ ತುಂಗೆಯ ಒಡಲು


* "ಮಿತಿಮೀರಿದ ಮರಳುಲೂಟಿಕೋರರ ಅಟ್ಟಹಾಸ

* ಅಧಿಕಾರಿಗಳ ಅಸಹಾಯಕತೆ

{ಮಧ್ಯ ಕರ್ನಾಟಕಕ್ಕೆ ಹೊಂದಿಕೊಂಡು ಬರುವ ಹಾವೇರಿ ಜಿಲ್ಲೆಯಲ್ಲಿ ಮರಳು ಲೂಟಿಕೋರರ ಅಟ್ಟಹಾಸ ಮಿತಿಮೀರಿದೆ. ಪರಿಣಾಮ ತುಂಗೆಯ ಒಡಲು ಬರಿದಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಕಡಿವಾಣಹಾಕಲು ಯತ್ನಿಸಿದ ಅಧಿಕಾರಿಗಳ ಮೇಲೆ ಹಲ್ಲೆಯೂ ನಡೆದಿದ್ದು ಅಧಿಕಾರಿಗಳು ಭಯಬೀಳುವಂತಾಗಿದೆ. ಮುಂಬರುವ ವರ್ಷ ತುಂಗಾ ಮೇಲ್ದಂಡೆ ಯೋಜನೆ ಎರಡನೇ ಹಂತ ಪೂರ್ಣಗೊಂಡು ನೀರಾವರಿ ಕನಸು ಕಾಣುತ್ತಿರುವ ರೈತರೀಗ ಅಕ್ರಮ ಮರಳುಗಾರಿಕೆ ಶಾಪವಾಗಿ ಪರಿಣಮಿಸಿದೆ.ಬರೀ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿರುವ ವಿಪಕ್ಷಗಳು ಅಕ್ರಮ ಮರಳುಗಾರಿಕೆ ಬಗ್ಗೆ ಚಕಾರ ಶಬ್ದ ಎತ್ತದಿರುವುದು ವಿಪರ್ಯಾಸದ ಸಂಗತಿಯಾಗಿದೆ. }

ನಮ್ಮ ರಾಜ್ಯವನ್ನು ಸದ್ದಿಲ್ಲದೇ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅಕ್ರಮ ಗಣಿಗಾರಿಕೆ ಇನ್ನೊಂದು ಅಕ್ರಮ ಮರಳು ದಂಧೆ. ಈ ಎರಡೂ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಒಂದು ಅರಣ್ಯ ಸಂಪತ್ತನ್ನು ದೋಚಿದರೆ ಇನ್ನೊಂದು ಅಂತರ್ಜಲ ಕುಸಿತ ಹಾಗೂ ನದಿಗಳು ಬತ್ತಲು ಕಾರಣವಾಗುತ್ತಿದೆ. ನಮ್ಮ ನಾಡಿನೆಲ್ಲೆಡೆ ನದಿಗಳು ಇರುವ ಕಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಪರಿಣಾಮ ಇದಕ್ಕೆ ಹಾಲೆರೆದು ಪೋಸುತ್ತಿರುವ ಪ್ರಭಾ"ವ್ಯಕ್ತಿಗಳ ಧನದಾಹದ ಕಬಂಧ ಬಾಹುವಿಗೆ ಸಿಕ್ಕು ಸಮಾಜ ನಲಗುವಂತಾಗಿದೆ. ಇದಕ್ಕೆ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯೂ ಹೊರತಾಗಿಲ್ಲ.

ನಿತ್ಯ ಲೂಟಿ: ಮಧ್ಯ ಕರ್ನಾಟಕಕ್ಕೆ ಹೊಂದಿಕೊಂಡು ಬರುವ ಈ "ಹಿಂದೆ ಧಾರವಾಡ ಜಿಲ್ಲೆಯಲ್ಲಿದ್ದ ಹಾವೇರಿ ಜೆ.ಎಚ್. ಪಟೇಲರ ಅವಧಿಯಲ್ಲಿ ಹೊಸ ಜಿಲ್ಲೆ ರಚನೆಯಾದಾಗ ಜನ್ಮ ತಾಳಿತು. ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮದ್ವತಿ ಹಾಗೂ ಧಮಾ ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ರಾಣೆಬೆನ್ನೂರು, ಹಿರೇಕೆರೂರು ಹಾಗೂ ಹಾವೇರಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಪ್ರಭಾವಿ ವ್ಯಕ್ತಿಗಳ ಕೃಪಾಕಟಾಕ್ಷವಿದೆ. ತುಂಗಭದ್ರಾ ನದಿತೀರದುದ್ದಕ್ಕೂ ನಡೆಯುತ್ತಿರುವ ಕಡಿವಾಣ ಹಾಕಲು ಈ ವರೆಗೆ ಸಾಧ್ಯವಾಗಿಲ್ಲ. ಮುಂಚೆಂದಲೂ ಕಡಿವಾಣ ಹಾಕುವ ಪ್ರಯತ್ನ ನಡೆದೇ ಇಲ್ಲ ಎನ್ನಬಹುದು. ಪರಿಣಾಮ ಮರಳು ಲೂಟಿಕೋರರ ಅಟ್ಟಹಾಸ ಮುಂದುವರೆದಿದೆ. ವಾಸ್ತವವಾಗಿ ಮರಳುಗಾರಿಕೆಗೆಂದು ಪಡೆದ ಪ್ರದೇಶಕ್ಕಿಂತ ಹೆಚ್ಚು ಕಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಕೆಲ ಹಂತದಲ್ಲಿ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ. ಅನುಮತಿ ಪಡೆದ ಪ್ರದೇಶದ ನಾಲ್ಕು ಪಟ್ಟು ಪ್ರದೇಶದಲ್ಲಿ ಈ ಕಳ್ಳ ದಂಧೆ ನಡೆಯುತ್ತಿದ್ದು, ಗೃಹ ನಿರ್ಮಾಣ ಸೇರಿದಂತೆ ಇತರೆ ಬಳಕೆಗೆ ಏನಿಲ್ಲವೆಂದರೂ ದಿನಕ್ಕೆ ೫೦೦ ರಿಂದ ೬೦೦ ಲಾರಿ ಮರಳು ಸಾಗಿಸಲಾಗುತ್ತದೆ.ಅಕ್ರಮವಾಗಿ ಸಾಗಿಸುವ ಫಿಲ್ಟರ್ ಮರಳಿನಿಂದ ತಯಾರಾಗುವ ಕಟ್ಟಡಗಳ ಗುಣಮಟ್ಟವೂ ಕಳಪೆಯಾಗುವ ಕಾರಣ ಕಟ್ಟಡ ಕುಸಿತಕ್ಕೂ ಕಾರಣ ಇನ್ನೊಂದೆಡೆ ನದಿಯಲ್ಲಿನ ನೀರು ಬತ್ತುವುದು. ಇವೆರಡೂ ಅಕ್ರಮ ಮರಳುಗಾರಿಕೆಂದಾಗುವ ಹಾನಿಯಾಗಿವೆ.

"ವಿರೋಧಿಸಿದಲ್ಲಿ ಅಪಾಯ: ಈ ಹಿಂದೆ ಅಂದರೆ ೨೦೦೨ರಲ್ಲಿ ಗಣಿ ಮತ್ತು ಭೂ"ಜ್ಞಾನ ಇಲಾಖೆಯವರು ಹರಾಜಿನ ಮೂಲಕ ಮರಳುಗಾರಿಕೆಗೆ ಗುತ್ತಿಗೆ ನೀಡಲು ನಿರ್ಧರಿಸಿತ್ತು. ಈ ನಿರ್ಧಾರಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿತು. ತನ್ನ ನಿರ್ಧಾರದಂತೆ ಹರಾಜು ಪ್ರಕಿಯೆ ಮೂಲಕ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕೆನ್ನುವ ಹೊತ್ತಿಗೆ ಸುಮಾರು ೭-೮ ವರ್ಷಗಳುರುಳಿದವು. ಈ ಅವಧಿಯಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿ ಚಿಗುರುಕೊಂಡ ಅಕ್ರಮ ಮರಳುಗಾರಿಕೆ ಇಂದು ಇಷ್ಟೊಂದು "ರಾಟರೂಪ ಪಡೆಯಲು ಕಾರಣವಾತು. ಪ್ರಸ್ತುತ ಜಿಲ್ಲೆಯಲ್ಲಿ ೨೫೦ ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮರಳುಗಾರಿಕೆಗೆ ಅಧಿಕೃತವಾಗಿ ಗಣಿ ಮತ್ತು ಭೂ "ಜ್ಞಾನ ಇಲಾಖೆ ಅನುಮತಿ ನೀಡಿದೆ. ಇದು ಇಲಾಖೆ ನೀಡುವ ಅಂಕಿ ಅಂಶವಾದರೂ ವಾಸ್ತವವೇ ಬೇರೆ. ಏನಿಲ್ಲವೆಂದರೂ ಸರಿ ಸುಮಾರು ೧೦೦೦ ಎಕರೆವರೆಗೆ ಅಕ್ರಮವಾಗಿ ಮರಳುಗಾರಿಕೆ ನಿರಾತಂಕವಾಗಿ ಸಾಗುತ್ತಿದೆ. ಇದನ್ನು ತಡೆಯಲು ಅಥವಾ ವಿರೋಧಿಸಲು ಯತ್ನಿಸಿದ ಪರಿಣಾಮ ಹಲ್ಲೆ. ಇದಕ್ಕೆ ಇತ್ತೀಚೆಗೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ತಹಸೀಲ್ದಾರ್ ಮೇಲೆ ನಡೆದ ಹಲ್ಲೆ ಪ್ರಕರಣವೇ ಉತ್ತಮ ನಿದರ್ಶನ.

ಏನಿದು ಪ್ರಕರಣ: ಬೇಲೂರಿನ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಆಕ್ರಮ ಮರಳುಗಾರಿಕೆ ಖಚಿತ ಮಾಹಿತಿ ಪಡೆದ ರಾಣೆಬೆನ್ನೂರು ತಹಸೀಲ್ದಾರ್ ಸ್ಥಳಕ್ಕೆ ಧಾವಿಸಿ ಮರಳುಗಾರಿಕೆಗೆ ಬಳಸುತ್ತಿದ್ದ ಬೋಟುಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಇದರಿಂದ ಕುಪಿತಗೊಂಡ ಬೋಟ್ ಮಾಲಿಕ ಯಾರೆಂಬುದನ್ನು ಲೆಕ್ಕಿಸದೇ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ. ಅಲ್ಲದೇ ಆತ್ಮಾಹುತಿಗೆ ಯತ್ನಿಸಿದ. ಇತನನ್ನು ಸಮಾಧಾನಪಡಿಸಲೆತ್ನಿಸಿದ ತಹಸೀಲ್ದಾರ್ ಮೇಲೆ ಹಲ್ಲೆ ನಡೆತು. ಯಾವುದೇ ಭಯ"ಲ್ಲದೇ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗುತ್ತಾರೆಂದರೆ ಇವರ ಬೆನ್ನಿಗೆ ನಿಂತು ರಕ್ಷಿಸುವವರು ಪ್ರಭಾ" ವ್ಯಕಿಯೇ ಆನ್ನುವುದನ್ನು ಬೇರೆ ಹೇಳಬೇಕಿಲ್ಲ. ಹಲ್ಲೆಗೈದವರ "ರುದ್ಧ ಪ್ರಕರಣ ದಾಖಲಾಗಿದೆಯಾದರೂ ಅಧಿಕಾರಿಗಳು ಭಯಬೀಳುವಂತಾಗಿದೆ.

ಹಾಗೆ ನೋಡಿದಲ್ಲಿ ಅಕ್ರಮ ಮರಳುಗಾರಿಕೆ ತಡೆ ನಿಟ್ಟಿನಲ್ಲಿ ಈ ಹಿಂದೆ ಲೋಕಾಯುಕ್ತರೂ ದಾಳಿ ನಡೆಸಿದ್ದರು. ಆವಾಗಲೂ ಲೋಕಾಯುಕ್ತರಿಗೆ ದೂರು ನೀಡಿದವರ ಮೇಲೆ ಹಲ್ಲೆಯಾದದ್ದನ್ನು ಇಲ್ಲಿ ಸ್ಮರಿಸಬಹುದು.

ಇದಿಷ್ಟು ಜಿಲ್ಲೆಯಲ್ಲಿ ನಡೆದು ಬಂದ ಮತ್ತು ಇಂದಿಗೂ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ಚಿತ್ರಣ. ಬೇಸಿಗೆಕಾಲ ಬಂತೆಂದರೆ ನೀರಿಗಾಗಿ ಹಪಹಪಿಸುವ ಜಿಲ್ಲೆಯ ಜನತೆಯ ಸಮಸ್ಯೆ ಪರಿಹಾರದ ದೃಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ತುರ್ತು ಆಗತ್ಯವಿದೆ. ಆ ಮೂಲಕ ತುಂಗೆಯ ಒಡಲು ಬರಿದಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲೆಯ ಜನತೆ ಹಾಗೂ ಜನಪ್ರತಿನಿಧಿಗಳ ಮೇಲಿದೆ. ಹಾಗಾದೀತೆ? ಇನ್ನಾದರೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಂತಿತೇ ಕಾದು ನೋಡಬೇಕು.

ಹೊಸ ಮರಳು ನೀತಿ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಲುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ರಾಜ್ಯ ಸರ್ಕಾರ ಹೊಸ ವರ್ಷದಿಂದ ಹೊಸ ಮರಳು ನೀತಿ ಜಾರಿ ತರಲು ಹೊರಟಿದೆ. ಅಕ್ರಮ ಮರಳು ದಂಧೆ ಮಾಡುವವರ "ರುದ್ಧ ಗೂಂಡಾಕಾಯ್ದೆ ಮಾಡುವ ಹಾಗೂ ಸಾರ್ವಜನಿಕರು ನೇರವಾಗಿ ನಿಗದಿತ ಸ್ಥಳದಿಂದ ಮರಳು ಖರೀದಿಸುವ ಅವಕಾಶ ಕಲ್ಪಿಸಲು ಮುಂದಾಗಿದೆ. ಸಚಿವ ಆರ್.ಅಶೋಕ್ ನೇತೃತ್ವದ ಸಂಪುಟ ಉಪಸ"ತಿ ಈ ನೀತಿ ಅಂತಿಮಗೊಳಿಸುವ ಜವಾಬ್ದಾರಿ ಹೊತ್ತಿದೆ. ತ"ಳುನಾಡು ಮಾದರಿಯಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಲಾಗುವುದೆಂದು ಸಚಿವ ಅಶೋಕ್ ತಿಳಿಸಿದ್ದಾರೆ.

No comments:

Post a Comment